ಕರ್ನಾಟಕ

ಸ್ಯಾಂಡಲ್​ವುಡ್​ಗೆ ದೊಡ್ಡ ಆಘಾತ: ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ

Pinterest LinkedIn Tumblr

ಬೆಂಗಳೂರು: ಕೊರೋನಾ ವಿಚಾರವಾಗಿ ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ಮಾರ್ಗಸೂಚಿ​ ಬಿಡುಗಡೆಯಾಗಿದ್ದು ಚಿತ್ರಮಂದಿರಗಳಲ್ಲಿ ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಈ‌ ಹಿಂದೆ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರು ಕೂರಬಹುದೆಂದು ಕೇಂದ್ರ ಅವಕಾಶ ನೀಡಿತ್ತು. ಆದರೆ ಕೊರೊನಾ 2ನೇ ಅಲೆ ಬರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಟಾಕೀಸ್​ಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊಸ ಮಾರ್ಗಸೂಚಿ​ ಫೆ.28ರವರೆಗೂ ಜಾರಿಯಲ್ಲಿರಲಿದೆ.

ಈ ವಾರದಿಂದ ಹೊಸ ಚಿತ್ರಗಳು ತೆರೆ ಕಾಣಲಿದ್ದು ರಾಜ್ಯ ಸರ್ಕಾರದ ಈ ನಡೆ ಸ್ಯಾಂಡಲ್​ವುಡ್​ಗೆ ದೊಡ್ಡ ಆಘಾತ ನೀಡಲಿದೆ.

ಹೊಸ ಮಾರ್ಗಸೂಚಿ​ ಫೆ.28ರವರೆಗೂ ಜಾರಿಯಲ್ಲಿರುತ್ತೆ. ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.

Comments are closed.