ಕರಾವಳಿ

‘ವೆಲ್-ಕಮ್ ಕೋವ್ಯಾಕ್ಸಿನ್’ ಮರಳು ಶಿಲ್ಪಾಕೃತಿ ರಚಿಸಿದ ಸ್ಯಾಂಡ್ ಥೀಂ ತಂಡ

Pinterest LinkedIn Tumblr

ಉಡುಪಿ: ಈಗಾಗಲೇ ಕೊರೋನಾ ಸಾಂಕ್ರಮಿಕ ರೋಗದಿಂದ ಇಡೀ ವಿಶ್ವವೇ ಕುಗ್ಗಿಹೋಗಿದ್ದು ಜಾಗತಿಕ ತುರ್ತು ಪರಿಸ್ಥಿತಿಯನ್ನಾಗಿ ಘೋಷಿಸಿದೆ. ಕೊರೋನಾ ರಾಕ್ಷಸನ ಅಲೆಗೆ ಹಲವು ಜೀವಗಳು ಕಳೆದುಕೊಳ್ಳುತ್ತಾ ಬಂದಿದ್ದು, ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಲಸಿಕೆಗಾಗಿ ಜನತೆ ಕೊರೊನಾ ಅಲೆಯನ್ನು ನಿಲ್ಲಿಸುವ ಮತ್ತು ಜೀವಗಳನ್ನು ಉಳಿಸಲು ಹರಸಾಹಸ ಪಡುವಂತಾಗಿತ್ತು.

ಇದೀಗ ಕೇಂದ್ರ ಸರ್ಕಾರದ ಅಧಿಸೂಚನೆಯಂತೆ‘ಕೋವ್ಯಾಕ್ಸಿನ್ ಮತ್ತು ಕೊವಿಶೀಲ್ಡ್’ ಎಂಬ ಲಸಿಕೆಗೆ ಹಸಿರು ನಿಶಾನೆಯನ್ನು ತೋರಿಸಿದ್ದು, ರಾಜ್ಯದಲ್ಲಿ ಇಂದು ಐತಿಹಾಸಿಕ ದಿನವನ್ನಾಗಿ ಮೊದಲ ಹಂತದ ಲಸಿಕೆಗೆ ಚಾಲನೆ ನೀಡುತ್ತಿದ್ದು ಯಥಾಸ್ಥಿತಿಯ ಪರಿಸ್ಥಿತಿ ಮತ್ತು ಆರೋಗ್ಯಕರ ಸುಗಮ ಜೀವನ ಸಾಗಿಸುವಂತಾಗಲಿ ಎನ್ನುವ ಧ್ಯೇಯದೊಂದಿಗೆ ರಚಿಸಿದ ಮರಳು ಶಿಲ್ಪ.

ಇಂತಹ ಲಸಿಕೆಯ ಮೂಲಕ ಕೊರೋನಾದ ನಿರ್ಮೂಲನೆಯ ದೃಶ್ಯದೊಂದಿಗೆ ‘ವೆಲ್‌ಕಂ-ವ್ಯಾಕ್ಸಿನ್’ ಎಂಬ ಶೀರ್ಷಿಕೆಯಡಿಯಲ್ಲಿ ‘ಸ್ಯಾಂಡ್ ಥೀಂ’ ಉಡುಪಿ ತಂಡವು ಕಲಾವಿದರಾದ ಹರೀಶ್ ಸಾಗಾ, ರಾಘವೇಂದ್ರ, ಜೈ ನೇರಳಕಟ್ಟೆ ಕೋಟೇಶ್ವರ ಹಳೆ-ಅಳಿವೆ ಕೋಡಿ ಬೀಚ್‌ನಲ್ಲಿ ಸಾರ್ವಜನಿಕರಿಗಾಗಿ ರಚಿಸಿರುವ 7 ಅಗಲ ಮತ್ತು 4 ಎತ್ತರ ಅಡಿಗಳುಳ್ಳ ಮರಳುಶಿಲ್ಪ.

 

Comments are closed.