ಕರ್ನಾಟಕ

ಪುರುಷರ ಜೊತೆಗಿನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ಹಣಕ್ಕೆ ಬ್ಲಾಕ್ಮೇಲ್ ಮಾಡುತ್ತಿದ್ದ ಮಾಜಿ ಶಿಕ್ಷಕಿಯೊಬ್ಬಳ ಬಂಧನ; ತಾನೇ ನೀಡಿದ ದೂರು ಈ ಶಿಕ್ಷಕಿಗೆ ಮುಳುವಾಗಿದ್ದು ಹೇಗೆ ಗೊತ್ತೇ…?

Pinterest LinkedIn Tumblr

ಬೆಂಗಳೂರು: ಇಲ್ಲೊಬ್ಬಳು ಮಾಜಿ ಶಿಕ್ಷಕಿ ತಾನೇ ಮಾಡಿದ ಹೊಂಡಕ್ಕೆ ತಾನೇ ಬಿದ್ದಿದ್ದಾಳೆ. ಹೈಟೆಕ್ ಹನಿಟ್ರ್ಯಾಪ್ ದಂಧೆ ನಡೆಸುತ್ತಾ ಮ್ಯಾಟ್ರಿಮೋನಿಯಲ್ಲಿ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನು ತನ್ನ ಖೆಡ್ಡಾಕ್ಕೆ ಬೀಳಿಸುತ್ತಿದ್ದ ಈಕೆಯ ಅಸಲಿಯತ್ತು ಕೊನೆಗೂ ಪೋಲೀಸರ ಬಂಧನದಿಂದ ಹೊರಬಿದ್ದಿದ್ದೆ.

ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನು ಟಾರ್ಗೆಟ್ ಮಾಡಿ, Matrimonyಯಲ್ಲಿ ವಂಚನೆ ಮಾಡುತ್ತಿದ್ದ ಮಾಡರ್ನ್ ಟೀಚರ್ ಈಗ ಪೊಲೀಸರ ಅತಿಥಿಯಾಗಿದ್ದಾಳೆ. Honey Trapping ದಂಧೆ ನಡೆಸುತ್ತಿದ್ದ ಈ ಟೀಚರ್ ಆ ಮೂಲಕ ಲಕ್ಷಾಂತರ ರೂ. ವಂಚನೆ ಮಾಡಿದ್ದಳು. ಅಲ್ಲದೆ, ಅವರ ಜೊತೆಗಿನ ಖಾಸಗಿ ದೃಶ್ಯಗಳನ್ನು ಚಿತ್ರಿಸಿಕೊಂಡು ತಾನೇ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು! ಅದಕ್ಕೆ ಅವರು ಒಪ್ಪದಿದ್ದರೆ ಅತ್ಯಾಚಾರದ ಆರೋಪ ಮಾಡುವುದಾಗಿ ಬೆದರಿಕೆಯನ್ನೂ ಒಡ್ಡುತ್ತಿದ್ದಳು.

ಕವಿತಾ ಬಂಧಿತ ಮಾಜಿ ಶಿಕ್ಷಕಿ. ಈ ಹಿಂದೆ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕವಿತಾ, ಕಾರಣಾಂತರಗಳಿಂದ ಶಿಕ್ಷಕ ವೃತ್ತಿ ಕಳೆದುಕೊಂಡಿದ್ದಳು. ಬಳಿಕ ಹನಿಟ್ರ್ಯಾಪ್ ದಂಧೆ ಆರಂಭಿಸದ್ದಳು.

ಮ್ಯಾಟ್ರಿಮೋನಿಯಲ್ಲಿ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಅವರೊಂದಿಗಿನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡು ನಂತರ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು ಎಂದು ಪೊಲೀಸರ ವಿಚಾರಣೆಯ ವೇಳೆ ತಿಳಿದುಬಂದಿದೆ. ಇದೇ ರೀತಿ ಕವಿತಾ ಡಿ. 22ರಂದು ಯುವಕನೊಬ್ಬನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಳು.

ಸಂತ್ರಸ್ತ ಯುವಕ ಅತ್ಯಾಚಾರವೆಸಗಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಿ ಪೊಲೀಸರನ್ನು ಕರೆಸಿ ಅವರ ಸಮ್ಮುಖದಲ್ಲೇ ಖಾಸಗಿ ವಿಡಿಯೋ ಡಿಲಿಟ್ ಮಾಡಿಸಿದ್ದಳು. ಯುವಕನ ವಿರುದ್ಧ ದೂರು ನೀಡದಿರಲು 2 ಲಕ್ಷ ಹಣಕ್ಕೆ ಆತನ ಬಳಿ ಬೇಡಿಕೆ ಇಟ್ಟಿದ್ದಳು. ಆದ್ರೆ ಸಂತ್ರಸ್ತ ಯುವಕ ಹಣ ನೀಡದಿದ್ದಾಗ ಡಿ.31ರಂದು ಆತನ ವಿರುದ್ಧ ಇಂದಿರಾನಗರ ಠಾಣೆಗೆ ದೂರು ನೀಡಿದ್ದಳು.

ಅಸಲಿಗೆ ವಿಡಿಯೋ ಡಿಲಿಟ್ ಮಾಡಲಾಗಿದೆ. ಆದರೂ ಈ ಪ್ರಕರಣ ಸಂಬಂಧ ಯುವಕನ ಮೇಲೆ ಕವಿತಾ ದೂರು ದಾಖಲಿಸಿದ್ದಳು. ಇತ್ಯರ್ಥ ಎಂದುಕೊಂಡ ಪ್ರಕರಣ ಮತ್ತೆ ಠಾಣಾ ಮೆಟ್ಟಿಲೇರಿದ್ದಾಗ ಪೊಲೀಸರಿಗೆ ಅನುಮಾನ ಬಂದಿದೆ. ಆಗ ಕವಿತಾಳ ಮೊಬೈಲ್ ಪಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕೆಯ ಕಳ್ಳಾಟ ಬಯಲಾಗಿದೆ.

ವಿಡಿಯೋ ಪರಿಶೀಲಿಸಿದಾಗ ಪರಸ್ಪರ ಒಪ್ಪಿಯೇ ದೈಹಿಕ ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ. ಕವಿತಾಳ ಬಣ್ಣ ಬಯಲಾಗುತ್ತಿದ್ದಂತೆ ಇಂದಿರಾನಗರ ಠಾಣಾ ಪೊಲೀಸರು ತೀವ್ರ ವಿಚಾರಣೆ ನಡೆಸಿ ದೂರುದಾರಳಾಗಿದ್ದ ಕವಿತಾಳ ಕೃತ್ಯ ತಿಳಿದುಕೊಂಡಿದ್ದಾರೆ.

ಕವಿತಾ ಇದೇ ಪ್ರಕರಣ ಸಂಬಂಧ ಯುವಕನ ಮೇಲೆ 2 ವಿವಿಧ ಠಾಣೆಗಳಲ್ಲಿ ದೂರು ನೀಡಿದ್ದಳು. ಹಾಗೂ ಮಲ್ಲೇಶ್ವರಂ, ಮಹಾದೇವಪುರ ಠಾಣೆಯಲ್ಲಿ ಈ ಹಿಂದೆ ಇದೇ ರೀತಿ ದೂರು ನೀಡಿದ್ದಳು.

Comments are closed.