
ಮುಜಾಫರನಗರ: ಮದುವೆಯಾಗಿ ತಿಂಗಳಿಲ್ಲ.. ನಗ, ನಗದು ಎತ್ಕೊಂಡು ಓಡಿ ಹೋದಳು ಆ ನವವಧು! ಹೀಗಂತ ಪೊಲೀಸ್ ದೂರು ದಾಖಲಿಸಿ ತಲೆಮೇಲೆ ಕೈ ಹೊತ್ತುಕುಳಿತಿದ್ದಾನೆ ನವವರ ಪಿಂಕು!.
ಹೌದು. ಅವರ ಮದುವೆ ನವೆಂಬರ್ 25ರಂದು ನಡೆದಿತ್ತು. ಡಿಸೆಂಬರ್ 26ರ ತನಕ ಸಂಸಾರದ ಬಂಡಿ ಹಾಗೂ ಹೀಗೂ ಸಾಗಿತ್ತು. ಅಂದು ಮನೆಯಲ್ಲಿದ್ದ ಚಿನ್ನಾಭರಣ, ನಗದು 70,000 ರೂಪಾಯಿಯೊಂದಿಗೆ ಹೆಂಡ್ತಿ ಓಡಿ ಹೋಗಿರುವುದು ಗಮನಕ್ಕೆ ಬಂತು. ಕೂಡಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ ದೂರು ದಾಖಲಿಸಿದ.
ವಂಚನೆಗೊಳಗಾದ ಪತಿಯ ಹೆಸರು ಪಿಂಕು. ಸಿಂಭಲ್ಕಾ ಗ್ರಾಮದ ನಿವಾಸಿ. ಶಾಮ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚಿಸಿದ ಪತ್ನಿ ಬಾಘಪತ್ ಜಿಲ್ಲೆಯ ಒಂದು ಗ್ರಾಮದವಳು. ಪತ್ನಿಯನ್ನು ಹುಡುಕಿಕೊಂಡು ಆ ಗ್ರಾಮಕ್ಕೆ ತೆರಳಿದಾಗ ಆಕೆಯ ಕುಟುಂಬದ ಸದಸ್ಯರೂ ಅಲ್ಲಿ ಇರಲಿಲ್ಲ ಎಂಬ ಮಾಹಿತಿಯಷ್ಟೇ ಬಹಿರಂಗವಾಗಿದೆ.
Comments are closed.