ಜೈಪುರ: ಪಾಠ ಹೇಳಿಕೊಡಬೇಕಾದ ಶಿಕ್ಷಕನೊಬ್ಬ, ಅಂಕ ಬೇಕೆಂದರೆ ನನ್ನ ಬಳಿ ಸೆಕ್ಸ್ ಮಾಡುವ ರೀತಿ ಇರಬೇಕು ಎಂದು ವಿದ್ಯಾರ್ಥಿನಿಯರ ಎದುರು ಬೇಡಿಕೆ ಇಟ್ಟಿರುವ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ. ಮೇಲಧಿಕಾರಿಯ ಎದುರು ವಿದ್ಯಾರ್ಥಿನಿಯರು ಶಿಕ್ಷಕನ ಕಾಮದಾಸೆಗಳನ್ನು ಬಿಚ್ಚಿಟ್ಟಿದ್ದು, ಇದೀಗ ಶಿಕ್ಷಕ ಜೈಲು ಪಾಲಾಗಿದ್ದಾನೆ.
ನೀಮ್ರಾನಾದ ಸರ್ಕಾರಿ ಶಾಲಾ ಶಿಕ್ಷಕ ದೇವ್ ಪ್ರಕಾಶ್ ಯಾದವ್ (45) ಆರೋಪ ಎದುರಿಸುತ್ತಿರುವ ಶಿಕ್ಷಕ. ಈತ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ವಿದ್ಯಾರ್ಥಿನಿಯರ ಗುಪ್ತಾಂಗ ಮುಟ್ಟುವುದು, ಅಸಭ್ಯ ರೀತಿಯಲ್ಲಿ ವರ್ತನೆ ಮಾಡುತ್ತಿದ್ದನಂತೆ. ಒಳ್ಳೆಯ ಮಾರ್ಕ್ಸ್ ಬೇಕಾದರೆ, ನನ್ ಜತೆ ದೈಹಿಕವಾಗಿ ಹೊಂದಿಕೊಳ್ಳಿ ಎಂದು ಹೇಳುತ್ತಿದ್ದನಂತೆ.
ಶಿಕ್ಷಕನ ಈ ನೀತಿಯಿಂದ ಬೇಸತ್ತಿದ್ದ ವಿದ್ಯಾರ್ಥಿನಿಯರು, ಮೇಲಧಿಕಾರಿ ಶಾಲೆಯ ಮೇಲ್ವಿಚಾರಣೆಗೆ ಬಂದಾಗ, ಅವರ ಎದುರು ಶಿಕ್ಷಕನ ಬಗ್ಗೆ ದೂರುಗಳನ್ನು ಇಟ್ಟಿದ್ದಾರೆ. ಸೂಕ್ಷ್ಮತೆಯನ್ನು ಅರಿತ ಅಧಿಕಾರಿಗಳು ಶಿಕ್ಷಣ ಇಲಾಖೆ ವಿಚಾರ ಮುಟ್ಟಿಸಿದ್ದು, ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ವಿಚಾರವಾಗಿ ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
Comments are closed.