ಮನೋರಂಜನೆ

‘ಎಲ್ಲಿಂದ ಪ್ರಾರಂಭ ಮಾಡಲಿ?’: ನಟಿ ಸನ್ನಿ ಲಿಯೋನ್​

Pinterest LinkedIn Tumblr


ಬೆಂಗಳೂರು: ಬಾಲಿವುಡ್​ ಬೆಡಗಿ ನಟಿ ಸನ್ನಿ ಲಿಯೋನ್​ ಹೆಸರು ಪ್ರಸ್ತಾಪವಾದ ತಕ್ಷಣ ಪಡ್ಡೆ ಹುಡುಗರ ವಲಯದಲ್ಲಿ ಒಂದು ಸಂಚಲನ ಉಂಟಾಗುತ್ತದೆ. ಅಂಥ ಸನ್ನಿ ಲಿಯೋನ್ ಇದೀಗ ಮತ್ತಷ್ಟು ಕುತೂಹಲ ಹುಟ್ಟು ಹಾಕಿದ್ದಾರೆ. ಅಷ್ಟಕ್ಕೂ ಆ ಕುತೂಹಲಕ್ಕೆ ಕಾರಣವಾಗಿದ್ದು ಅವರ ಒಂದು ಸ್ಟೇಟಸ್​.

ಆ ಒಂದು ಸಾಲು ಅವರ ಅಭಿಮಾನಿಗಳಲ್ಲಿ, ಸಿನಿಮಾಪ್ರಿಯರ ವಲಯದಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಸನ್ನಿ ಲಿಯೋನ್ ಏನಾದರೂ ತಮ್ಮ ಆತ್ಮಕಥೆ ಬರೆಯಲು ಆರಂಭಿಸಬಹುದಾ ಅಥವಾ ಅವರ ಜೀವನಾಧರಿತ ಸಿನಿಮಾ ಏನಾದರೂ ಬರಬಹುದಾ? ಇಲ್ಲ ಮತ್ತೇನಾದರೂ ಶುರು ಹಚ್ಕೋತಾರಾ ಎಂಬ ಪ್ರಶ್ನೆಗಳು ಈಗ ಬಾಲಿವುಡ್​​ನಲ್ಲಿ ಮೂಡಿವೆ.

ಏಕೆಂದರೆ ಟ್ವಿಟರ್​ನಲ್ಲಿ ತಮ್ಮದೊಂದು ಫೋಟೋ ಹಂಚಿಕೊಂಡಿರುವ ಸನ್ನಿ ಲಿಯೋನ್​, ‘ತುಂಬಾ ಹೇಳೋದಿದೆ, ಆದರೆ ಎಲ್ಲಿಂದ ಶುರು ಮಾಡಲಿ?’ ಎಂಬುದಾಗಿ ಹೇಳಿಕೊಂಡಿದ್ದಾರೆ. ಆತ್ಮಕಥೆಯೋ, ಬಯೋಪಿಕ್ಕೋ? ಯಾವುದರ ಬಗ್ಗೆ ಸನ್ನಿ ಲಿಯೋನ್ ಹೇಳಬೇಕೆಂದುಕೊಂಡಿದ್ದಾರೋ ಅವರಿಗಷ್ಟೇ ಗೊತ್ತು. ಆದರೆ ಅವರ ಆ ಒಂದು ಸಾಲು ಭರ್ಜರಿ ಕುತೂಹಲ ಹುಟ್ಟಿಸಿರುವುದಂತೂ ನಿಜ ಎನ್ನುತ್ತಿವೆ ಬಾಲಿವುಡ್ ಮೂಲಗಳು.

Comments are closed.