ರಾಷ್ಟ್ರೀಯ

ಮುಂದಿನ ವಾರವೇ ಮಾರುಕಟ್ಟೆಗೆ ಬರಲಿದೆ ಕೊರೊನಾ ಲಸಿಕೆ

Pinterest LinkedIn Tumblr
F

ನವದೆಹಲಿ: ಕೊರೋನಾ​ ವಿರುದ್ಧದ ಲಸಿಕೆ ಫೀಜರ್​​ಗೆ ಬ್ರಿಟನ್​ ಅನುಮೋದನೆ ನೀಡಿದೆ. ಲಸಿಕೆಗೆ ಔಪಚಾರಿಕ ಅನುಮೋದನೆ ನೀಡಿದ ಪ್ರಥಮ ದೇಶ ಬ್ರಿಟನ್​ ಆಗಿದೆ.

ಫಿಜರ್​ ಬಯೋಟೆಕ್​ ಲಸಿಕೆಗೆ ಬ್ರಿಟನ್​ನ ಔಷಧಿ ಹಾಗೂ ಆರೋಗ್ಯ ನಿಯಂತ್ರಣ ಸಂಸ್ಥೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಪ್ರಯೋಗದ ವೇಳೆ 95 ಶೇಕಡಾ ಪರಿಣಾಮಕಾರಿ ಎಂದು ಸಾಬೀತುಪಡಿಸಿದ ಫಿಜರ್​ ಮುಂದಿನ ವಾರದಿಂದ ಬಳಕೆಗೆ ಲಭ್ಯವಿರಲಿದೆ.

ಮುಂದಿನ ವಾರದಿಂದ ಬ್ರಿಟನ್​​ನಲ್ಲಿ ಕೊರೊನಾ ಲಸಿಕೆ ಸಿಗಲಿದೆ. ಈ ಲಸಿಕೆ ಮೂಲಕ ನಮ್ಮ ಜೀವನವನ್ನ ಪುನರ್​ಸ್ಥಾಪಿಸುತ್ತೇವೆ ಅಂತಾ ಬ್ರಿಟನ್​ ಅಧ್ಯಕ್ಷ ಬೋರಿಸ್ ಜಾನ್ಸನ್​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.