ಕರಾವಳಿ

ರೌಡಿಶೀಟರ್ ಇಂದ್ರಜಿತ್ ಹತ್ಯೆ ಪ್ರಕರಣ : ಎಂಟು ಮಂದಿ ವಶಕ್ಕೆ ಪಡೆದ ಬರ್ಕೆ ಪೊಲೀಸರು

Pinterest LinkedIn Tumblr

ಮಂಗಳೂರು, ನವೆಂಬರ್ 28 : ಬುಧವಾರ ತಡರಾತ್ರಿ ಬೊಕ್ಕಪಟ್ಣ ಬಳಿ ನಡೆದ ರೌಡಿಶೀಟರ್ ಇಂದ್ರಜಿತ್ (29) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ಬರ್ಕೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೋಳೂರಿನಲ್ಲಿ ಸ್ನೇಹಿತನೊಬ್ಬನ ವಿವಾಹದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇಂದ್ರಜಿತ್. ಅಲ್ಲಿಂದ ಮಧ್ಯರಾತ್ರಿ ಮನೆಗೆ ಮರಳುತ್ತಿದ್ದ ಸಂದರ್ಭ ನಗರದ ಕುದ್ರೋಳಿಯ ಕರ್ನಲ್‌‌ ಗಾರ್ಡ್‌ನ್‌‌ ಬಳಿ ಇಂದ್ರಜಿತ್ ನನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಬರ್ಕೆ ಪೊಲೀಸರು ಈಗಾಗಲೇ 17ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದರೆ. ಈ ಪೈಕಿ ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ರೌಡಿಶೀಟರ್ ಇಂದ್ರಜಿತ್‌ನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಆತನ ವೈರಿಗಳೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಇದೇ ಆಧಾರದ ಮೇಲೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.