ಕರಾವಳಿ

ಮಂಗಳೂರಿನ ಗೋಡೆ ಮೇಲೆ ಲಷ್ಕರ್ ಉಗ್ರರ ಪರ ಬರಹ ಬರೆದ ಆರೋಪಿಗಳ ಬಂಧನಕ್ಕೆ ಆಗ್ರಹ

Pinterest LinkedIn Tumblr

ಮಂಗಳೂರು, ನವೆಂಬರ್.27 : ಮಂಗಳೂರಿನ ಕದ್ರಿ ನಗರ ವ್ಯಾಪ್ತೀಯ ರಸ್ತೆ ಬದಿಯ ಸಮುಚ್ಚಯ ಒಂದರ ಅವರಣ ಗೋಡೆಯಲ್ಲಿ ಭಯೋತ್ಫಾದನ ಸಂಘಟನೆಗಳಿಗೆ ಬೆಂಬಲ ಸೂಚಿಸಿ ದೇಶ ವಿರೋಧಿ ಬರಹ ಬರೆದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಕದ್ರಿ ಪೊಲೀಸ್ ಠಾಣೆಯಲ್ಲಿ ಹಿಂದು ಜಾಗರಣ ವೇದಿಕೆ ಮನವಿ ನೀಡಿದೆ.

ನಗರದ ಕದ್ರಿ ಬಳಿಯ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಒಂದರ ಕಂಪೌಂಡ್ ನಲ್ಲಿ ಕೆಲ ಕಿಡಿಗೇಡಿಗಳು ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಕೌಂಪೌಂಡ್‌ನ ಮೇಲೆ ಹ್ಯಾಷ್ ಟ್ಯಾಗ್ ಹಾಕಿ, “ಲಷ್ಕರ್‌‌ ಜಿಂದಾಬಾದ್”‌‌‌‌‌ ಎಂದು ಬರೆದಿದ್ದು,’ಡು ನಾಟ್ ಫೋರ್ಸ್ ಅಸ್‌ ಟು ಇನ್ವೈಟ್ ತಾಲಿಬಾನ್ ಆಯಂಡ್ ಲಷ್ಕರ್-ಇ-ತೊಯ್ಬಾ ಟು ಡೀಲ್‌ ವಿತ್ ಸಂಘೀಸ್ ಆಯಂಡ್ ಮನ್ವೇದಿಸ್’ (“Do not force us to invite Lashkar-e-Toiba and Taliban to Deal with Sanghis and Manvedis” ಎಂದು ಇಂಗ್ಲೀಷ್​ನಲ್ಲಿ ಬರೆದು ಬರಹದ ಮೂಲಕ ಲಷ್ಕರ್ ಉಗ್ರರನ್ನ ಕರೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ಇದರ ಅನುವಾದ ಸಂಘಿಗಳು ಮತ್ತು ಮನುವಾದಿಗಳ ವಿರುದ್ಧ ಹೋರಾಟಕ್ಕೆ ಲಷ್ಕರ್-ಇ-ತೊಯ್ಬಾ, ತಾಲಿಬಾನ್‌ ಸಂಘಟನೆಗೆ ಆಹ್ವಾನಿಸಲು ನಮ್ಮನ್ನು ಪ್ರೇರೇಪಿಸಬೇಡಿ ಎಂಬುವುದಾಗಿತ್ತು.

ಸದ್ಯ ಸ್ಥಳಕ್ಕೆ ಕದ್ರಿ ಆಗಮಿಸಿದ ಪೊಲೀಸರು ವಿವಾದಿತ ಬರಹದ ಮೇಲೆ ಪೇಂಟಿಂಗ್ ಮಾಡಿ ಅಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಕದ್ರಿ ಪೊಲೀಸರಿಂದ ಶೋಧಕಾರ್ಯ ಶುರು ಮಾಡಿದ್ದು ಬರಹವಿದ್ದ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ.

Comments are closed.