ಕರಾವಳಿ

ಮಂಗಳೂರಿನ ಬೊಕ್ಕಪಟ್ಟಣ ಸಮೀಪ ರೌಡಿಶೀಟರ್‌ ಇಂದ್ರಜೀತ್‌ ಬರ್ಬರ ಹತ್ಯೆ

Pinterest LinkedIn Tumblr

ಮಂಗಳೂರು : ರೌಡಿಶೀಟರ್‌ ಓರ್ವನನ್ನು ಭೀಕರವಾಗಿ ಹತ್ಯೆಗೈದ ಘಟನೆ ಬುಧವಾರ ರಾತ್ರಿ ಮಂಗಳೂರಿನಲ್ಲಿ ನಡೆದಿದ್ದು, ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಬೊಕ್ಕಪಟ್ಟಣದ ಕರ್ನಲ್‌ ಗಾರ್ಡನ್‌ ಒಳಗಡೆ ರೌಡಿಶೀಟರ್‌ ಇಂದ್ರಜೀತ್‌ (29) ಎಂಬಾತನನ್ನು ದುಷ್ಕರ್ಮಿಗಳು ಮಾರಾಕ ಅಯುಧಗಳಿಂದ ಇರಿದು ಹತ್ಯೆಮಾಡಿದ್ದಾರೆ.

ಬೊಕ್ಕಪಟ್ಟಣ ಸಮೀಪದ ಮನೆಯೊಂದರಲ್ಲಿ ಬುಧವಾರ ರಾತ್ರಿ ನಡೆದ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಈತ ಭಾಗಿಯಾಗಿದ್ದು ಅಲ್ಲಿ ಈತನ ವೈರಿಗಳ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು ಎನ್ನಲಾಗಿದೆ.
ಬಳಿಕ ರಾತ್ರಿ ಸುಮಾರು 2 ಗಂಟೆಗೆ ಕರ್ನಲ್‌ ಗಾರ್ಡನ್‌ ಬಳಿ ಈತನ ಹತ್ಯೆಗೈಯಲಾಗಿದೆ ಎನ್ನಲಾಗಿದೆ. ಈತ ಸ್ಥಳೀಯ ರೌಡಿಯಾಗಿದ್ದು ಹಲವರ ಜೊತೆ ವೈರ ಕಟ್ಟಿಕೊಂಡಿದ್ದ ಎನ್ನಲಾಗಿದೆ.

Comments are closed.