ರಾಷ್ಟ್ರೀಯ

ಹಣ ಕಳಿಸೋದಕ್ಕೆ ‘ಚಾರ್ಜ್’- ಬಿಗ್ ಶಾಕ್ ಕೊಟ್ಟ ‘ಗೂಗಲ್‌ ಪೇ’…!

Pinterest LinkedIn Tumblr

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹಣ ಕಳಿಸುವ ವ್ಯವಸ್ಥೆಗೆ ಗೂಗಲ್ ಪೇ ಅನ್ನು ಜನ ನೆಚ್ಚಿಕೊಂಡಿದ್ದಾರೆ. ಆದರೆ ಗೂಗಲ್ ಪೇ ತನ್ನ ಬಳಕೆದಾರರಿಗೆ ಶಾಕ್‌ ನೀಡಲು ಮುಂದಾಗಿದ್ದು,ಗೂಗಲ್ ಪೇ ಮೂಲಕ ಉಚಿತವಾಗಿ ಹಣ ಕಳುಹಿಸುವ ವ್ಯವಸ್ಥೆ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ ಎನ್ನಲಾಗುತ್ತಿದೆ.

ಗೂಗಲ್​ ಪೇ ವ್ಯವಸ್ಥೆ ಮುಂದೆ ಉಚಿತವಾಗಿ ಲಭಿಸುವುದಿಲ್ಲ ಎಂಬ ಮಾಹಿತಿಯಿದ್ದು, ಸದ್ಯದಲ್ಲೇ ಗೂಗಲ್​ ಪೇ ಮೂಲಕ ಹಣ ಕಳುಹಿಸುವುದಕ್ಕೂ ಶುಲ್ಕ ಪಡೆಯಲಾಗುತ್ತೆ. ಆದರೆ ಗ್ರಾಹಕರಿಗೆ ಎಷ್ಟು ಶುಲ್ಕ ವಿಧಿಸಲಾಗುತ್ತೆ ಎನ್ನುವುದನ್ನು ಮಾತ್ರ ಗೂಗಲ್ ಪೇ ಬಹಿರಂಗಪಡಿಸಿಲ್ಲ.

2021ರ ಜನವರಿಯಿಂದ ಸದ್ಯದ ಹಣ ವರ್ಗಾವಣೆ ವ್ಯವಸ್ಥೆಯನ್ನ ಗೂಗಲ್​ ಪೇ ಸ್ಥಗಿತಗೊಳಿಸಲಿದ್ದು, ಬದಲಿಗೆ ಇನ್​ಸ್ಟಂಟ್ ಮನಿ ಟ್ರಾನ್ಸ್​​ಫರ್ ಸಿಸ್ಟಮ್​ ಅಳವಡಿಸಲಿದೆ. ಆ ಬಳಿಕ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

Comments are closed.