
ನಟ ದರ್ಶನ್ ನಟನೆಯ ‘ಐರಾವತ’ ಚಿತ್ರ ಪಾಕಿಸ್ತಾನದಲ್ಲಿ ‘ಗ್ಯಾಂಗ್‌ಸ್ಟರ್’ ಎಂಬ ಶೀರ್ಷಿಕೆ ಪಡೆದು ಬಿಡುಗಡೆ ಆಗಿದೆ. ಹಿಂದಿಗೆ ಡಬ್ ಆದ ಕನ್ನಡದ ಮೊದಲ ಸಿನಿಮಾ ದೊಡ್ಡ ಹಿಟ್ ಆಗಿತ್ತು ಅಂದರೆ ಅದು ‘ಐರಾವತ’ ಎನ್ನಬಹುದು.
ನಿರ್ದೇಶಕ ಎಪಿ ಅರ್ಜುನ್ ‘ಐರಾವತ’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಸಂದೇಶ್ ನಾಗರಾಜ್ ಈ ಚಿತ್ರ ನಿರ್ಮಾಣ ಮಾಡಿದ್ದರು. 2015ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಬಾಲಿವುಡ್ ನಟಿ ಊರ್ವಶಿ ರೌಟೇಲಾ ಈ ಚಿತ್ರದ ನಾಯಕಿ. ಊರ್ವಶಿ ರೌಟೇಲಾ ಅವರು ಬಾಲಿವುಡ್ ಸಂದರ್ಶನವೊಂದರಲ್ಲಿ ಬಾಲಿವುಡ್‌ನಲ್ಲಿ ಮೊದಲು ಸಿನಿಮಾ ಮಾಡಿ ಆಮೇಲೆ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಯಾಕೆ ನಟಿಸಿದ್ರಿ? ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಊರ್ವಶಿ ರೌಟೇಲಾ, ‘ಐರಾವತ ಸಿನಿಮಾ ಒಪ್ಪಿಕೊಳ್ಳುವ ಮುನ್ನ ನಾನು ಕರ್ನಾಟಕದ ಸೂಪರ್ ಸ್ಟಾರ್ ದರ್ಶನ್ ಜೊತೆ ನಟಿಸುತ್ತಿದ್ದೇನೆ ಎಂದು ಗೊತ್ತಿರಲಿಲ್ಲ. ಸಿನಿಮಾ ಶೂಟಿಂಗ್ ಮಾಡುತ್ತಿರುವಾಗ ದರ್ಶನ್ ಅಭಿಮಾನಿ ಬಳಗ, ಫ್ಯಾನ್ಸ್ ಕ್ರೇಜ್ ನೋಡಿ ನಿಜಕ್ಕೂ ಆಶ್ಚರ್ಯವಾಯಿತು. ಇಂತಹ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ನಟನ ಜೊತೆ ನಟಿಸಿದ್ದು ನನಗೆ ಹೆಮ್ಮೆಯ ವಿಷಯ’ ಎಂದು ಹೇಳಿದ್ದರು.
ದರ್ಶನ್ ಅವರ ಹುಟ್ಟುಹಬ್ಬದ ದಿನ ಸಾವಿರಾರು ಸಂಖ್ಯೆಯಲ್ಲಿ ಅವರ ಮನೆ ಮುಂದೆ ಜನರು ಸೇರುತ್ತಾರೆ. ಈ ವಿಡಿಯೋವನ್ನು ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ನೋಡಿ ಆಶ್ಚರ್ಯಪಟ್ಟಿದ್ದರಂತೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿದ್ದರು. ಪ್ರಾದೇಶಿಕ ಭಾಷೆಗಳು ಸಿನಿಮಾ ವಿಚಾರದಲ್ಲಿ ಎಷ್ಟು ಸುಧಾರಿಸಿವೆ, ಇದರ ರೀಚ್ ಎಷ್ಟಿದೆ ಎಂಬುದು ಈ ವಿಡಿಯೋ ನೋಡಿ ಅರ್ಥವಾಯಿತು ಎಂದು ಹೇಳಿದ್ದಾರೆ.
ಫೀಲ್ಡ್‌ಗಿಳಿದು ಕ್ರಿಕೆಟ್ ಆಡಿ ಕುಣಿದು ಕುಪ್ಪಳಿಸಿದ ‘ಚಾಲೆಂಜಿಂಗ್ ಸ್ಟಾರ್’ ನಟ ದರ್ಶನ್!
Comments are closed.