ಅಂತರಾಷ್ಟ್ರೀಯ

ಕೌಟುಂಬಿಕ ಸಮಸ್ಯೆಯಿಂದ ನೊಂದು 9 ವರ್ಷ ಸನ್ಯಾಸಿನಿ ಆಗಿದ್ದವಳು ಈಗ ನೀಲಿತಾರೆ​!

Pinterest LinkedIn Tumblr


ಕೌಟುಂಬಿಕ ಸಮಸ್ಯೆಯಿಂದ ನೊಂದು ಆಧ್ಯಾತ್ಮದ ಕಡೆ ಒಲವು ಪಡೆದು ಸನ್ಯಾಸಿಯಾದ ಅನೇಕ ಉದಾಹರಣೆಗಳಿವೆ. ಆ್ಯಡಿ ಆಡಮ್ಸ್​ ಹೆಸರಿನ ಯುವತಿ ಕೂಡ ಸಂಸಾರ ಜಂಜಾಟದಿಂದ ಹೊರ ಬಂದು 17ನೇ ವರ್ಷಕ್ಕೆ ಸನ್ಯಾಸಿ ಆಗಿದ್ದರು. ಅಚ್ಚರಿ ಎಂದರೆ, 9 ವರ್ಷಗಳ ನಂತರ ಆಕೆ ಆಗಿದ್ದು ನೀಲಿತಾರೆ!

ಹೌದು, ಆ್ಯಡಿ ಆ್ಯಡಮ್ಸ್​​ಗೆ 17ನೇ ವರ್ಷಕ್ಕೆ ಆಧ್ಯಾತ್ಮದ ಕಡೆ ಒಲವು ಬಂದಿತ್ತು. ಹೀಗಾಗಿ ಚರ್ಚ್ ಒಂದರಲ್ಲಿ ಅವರು ಸನ್ಯಾಸಿ ಆಗಿ ಸೇರಿಕೊಂಡರು. ಬರೋಬ್ಬರಿ 9 ವರ್ಷಗಳ ಕಾಲ ಅವರು ಸನ್ಯಾಸಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ, ಅವರ ಬಳಿ ಕಾಮನೆಗಳನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಹೀಗಾಗ, ಆಕೆ ಹಾಲಿವುಡ್​ ಚಿತ್ರರಂಗಕ್ಕೆ ಕಾಲಿಡಲು ನಿರ್ಧರಿಸಿದ್ದರು.

ಹಾಲಿವುಡ್​ನಲ್ಲಿ ನಟಿ ಆಗುವುದು ಎಂದರೆ ಅದೇನು ಸಾಮಾನ್ಯವೇ? ಆದರೂ ಆ್ಯಡಿ ಛಲ ಬಿಡಲಿಲ್ಲ. ಸನ್ಯಾಸತ್ವವನ್ನು ತ್ಯಜಿಸಿ ಬಣ್ಣದ ಲೋಕಕ್ಕೆ ಕಾಲಿಡಲು ಮುಂದಾದರು.

ಸಿಕ್ಕ ಸಿಕ್ಕವರ ಬಳಿ ಚಾನ್ಸ್​ ಕೇಳಿದರು. ಆದರೆ, ಕನಸು ಈಡೇರಲೇ ಇಲ್ಲ. ಈ ವೇಳೆ ಆ್ಯಡಿಯನ್ನು ಸೆಳೆದಿದ್ದು ಪಾರ್ನ್​​ ಲೋಕ.

ಹಾಲಿವುಡ್​ ಕನಸು ನನಸಾಗದ ಕಾರಣ ಆ್ಯಡಿ ನೀಲಿ ಲೋಕಕ್ಕೆ ಕಾಲಿಟ್ಟರು. ಸಾಕಷ್ಟು ಪಾರ್ನ್​ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಅಮೇರಿಕದಲ್ಲಿ ಆ್ಯಡಿ ಬಹುಬೇಡಿಕೆಯ ಪಾರ್ನ್​ ನಟಿ. ಅವರು ಇತ್ತೀಚೆಗೆ ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

“ಸನ್ಯಾಸಿ ಆಗುವುದಕ್ಕೂ ಮೊದಲು ಒಮ್ಮೆ ಲೈಂಗಿಕ ಸಂಪರ್ಕ ಬೆಳೆಸಿದ್ದೆ. ಇದಾದ ನಂತರ ಕಾಮನೆಗಳನ್ನು ಬದಿಗಿಟ್ಟು ಚರ್ಚ್​ಗೋಸ್ಕರ 9 ವರ್ಷ ಸೇವೆ ಸಲ್ಲಿಸಿದ್ದೆ. ಆದರೆ, ನನ್ನ ಆಸೆಗಳನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಚಿತ್ರರಂಗಕ್ಕೆ ಕಾಲಿಡುವ ಪ್ರಯತ್ನ ಮಾಡಿದೆ. ಅದೂ ವಿಫಲವಾಯಿತು. ಈಗ ಪಾರ್ನ್​ ಉದ್ಯಮದಲ್ಲಿ ಒಳ್ಳೆಯ ಹೆಸರು ಗಳಿಸಿದ್ದೇನೆ,” ಎಂದಿದ್ದಾರೆ ಅವರು.

Comments are closed.