ಅಂತರಾಷ್ಟ್ರೀಯ

ಟ್ರಂಪ್ ಅಧ್ಯಕ್ಷ ಸ್ಥಾನದಿಂದ ಹೊರಬಂದ ಕೂಡಲೇ ಜೈಲಿಗೆ ಹೋಗುವ ಅಪಾಯ

Pinterest LinkedIn Tumblr


ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಈಗಾಗಲೇ ಸೋಲನುಭವಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ನಿಜವಾದ ತೊಂದರೆಗಳು ಆರಂಭವಾಗಲಿವೆ. ವಾಸ್ತವವಾಗಿ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷ ಸ್ಥಾನದಿಂದ ಹೊರಬಂದ ಕೂಡಲೇ ಜೈಲಿಗೆ ಹೋಗುವ ಸಾಧ್ಯತೆ ಇದೆ.

ಬಿಬಿಸಿ ಪ್ರಕಾರ ಮುಂಬರುವ ದಿನಗಳಲ್ಲಿ ಡೊನಾಲ್ಡ್ ಟ್ರಂಪ್‌ ಭಾರೀ ತೊಂದರೆಗಳನ್ನು ಎದುರಿಸಬೇಕಾಗಬಹುದು. ಟ್ರಂಪ್ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಲವು ಹಗರಣಗಳ ಆರೋಪದ ಮೇಲೆ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೂಡಲೇ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ (Criminal case) ಹೂಡಲಾಗುವುದು. ಅವರ ಅಧಿಕಾರವಧಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣಗಳ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೇ ಎನ್ನಲಾಗುತ್ತಿದೆ. ವಾಸ್ತವವಾಗಿ ಯುಎಸ್ನಲ್ಲಿ ಅಧ್ಯಕ್ಷ ಸ್ಥಾನದಲ್ಲಿರುವಾಗ ಅವರ ವಿರುದ್ಧ ಯಾವುದೇ ಮೊಕದ್ದಮೆ ಹೂಡಲು ಸಾಧ್ಯವಿಲ್ಲ.

ರಾಯಿಟರ್ಸ್ ಪ್ರಕಾರ, ಪೇಸ್ ವಿಶ್ವವಿದ್ಯಾಲಯದ ಸಾಂವಿಧಾನಿಕ ಕಾನೂನಿನ ಪ್ರಾಧ್ಯಾಪಕ ಬೆನೆಟ್ ಗೆರ್ಷ್ಮನ್, ಡೊನಾಲ್ಡ್ ಟ್ರಂಪ್ ಅವರನ್ನು ಕ್ರಿಮಿನಲ್ ಪ್ರಕರಣಗಳಿಗೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಹೇಳಿದರು. ಬ್ಯಾಂಕ್ ವಂಚನೆ, ತೆರಿಗೆ ವಂಚನೆ, ಮಾರುಕಟ್ಟೆ ಲಾಂಡರಿಂಗ್, ಚುನಾವಣಾ ವಂಚನೆ ಮುಂತಾದ ಪ್ರಕರಣಗಳಲ್ಲಿ ಅಧ್ಯಕ್ಷ ಟ್ರಂಪ್ ವಿರುದ್ಧ ಆರೋಪ ಎದುರಿಸಬೇಕಾಗಬಹುದು. ಯುಎಸ್ ಮಾಧ್ಯಮ ವರದಿಗಳ ಪ್ರಕಾರ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಮಾತ್ರವಲ್ಲ, ಅವರು ಆರ್ಥಿಕ ನಷ್ಟವನ್ನೂ ಎದುರಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಅವರು ವೈಯಕ್ತಿಕ ಸಾಲ ಮತ್ತು ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.

ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಟ್ರಂಪ್ $ 300 ಮಿಲಿಯನ್ಗಿಂತ ಹೆಚ್ಚಿನ ಸಾಲವನ್ನು ಹೊಂದಿದ್ದಾರೆ, ಅದನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಅವರು ಮರುಪಾವತಿಸಬೇಕಾಗಿದೆ. ಖಾಸಗಿ ಹೂಡಿಕೆಗಳು ಉತ್ತಮ ಸ್ಥಿತಿಯಲ್ಲಿಲ್ಲ. ಟ್ರಂಪ್ ಅಧ್ಯಕ್ಷರಲ್ಲದಿದ್ದರೆ, ಸಾಲಗಾರರು ಟ್ರಂಪ್‌ಗೆ ಸಾಲ ಪಾವತಿಸುವಂತೆ ಒತ್ತಡ ಹೇರಬಹುದು. ವರದಿಗಳ ಪ್ರಕಾರ ಡೊನಾಲ್ಡ್ ಟ್ರಂಪ್ ಪ್ರಸ್ತುತ ವಿಮರ್ಶಕರ ಗುರಿಯಾಗಿದ್ದಾರೆ. ಅಧ್ಯಕ್ಷ ಸ್ಥಾನದಲ್ಲಿದ್ದಾಗ ಅನೇಕ ಅಪರಾಧಗಳು ನಡೆದಿವೆ ಎಂಬುದು ವಿಮರ್ಶಕರ ವಾದವಾಗಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಅವರ ಎಲ್ಲಾ ಕೃತಿಗಳ ವರದಿಯನ್ನು ಬಹಿರಂಗಪಡಿಸಬಹುದು.

ಈ ಎಲ್ಲದರ ನಡುವೆ ತಮ್ಮ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣಗಳ ಆರೋಪದಿಂದ ಅವರು ಈಗಾಗಲೇ ಖುಲಾಸೆಗೊಂಡಿರುವುದಾಗಿ ಟ್ರಂಪ್ ನಂಬಿದ್ದಾರೆ. ನ್ಯಾಯಾಂಗ ಇಲಾಖೆಯ ತನಿಖೆಯಲ್ಲಿ ಆತನ ವಿರುದ್ಧ ಅಂತಹ ಯಾವುದೇ ಪುರಾವೆಗಳಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಆದಾಗ್ಯೂ ಈ ಎಲ್ಲಾ ತನಿಖೆಗಳು ಅವರ ಅಧ್ಯಕ್ಷೀಯ ಅವಧಿಯಲ್ಲಿ ನಡೆದವು. ಈ ಹಿನ್ನಲೆಯಲ್ಲಿ ಖುಲಾಸೆ ಗೊಂಡಿದ್ದಾರೆ ಎಂದು ವಿಮರ್ಶಕರು ನಂಬಿದ್ದಾರೆ. ಅಧ್ಯಕ್ಷರಾಗಿದ್ದಾಗ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು ನ್ಯಾಯಾಂಗ ಇಲಾಖೆ ಸ್ಪಷ್ಟಪಡಿಸಿದೆ.

ವರದಿಗಳ ಪ್ರಕಾರ ಡೊನಾಲ್ಡ್ ಟ್ರಂಪ್ ಅವರ ಮಾಜಿ ವಕೀಲ ಮೈಕೆಲ್ ಕೋಹೆನ್ ವಿರುದ್ಧವೂ ತನಿಖೆ ನಡೆದಿದೆ. 2018ರಲ್ಲಿ ಮೈಕೆಲ್ ಕೋಹೆನ್ ಅವರು ಚುನಾವಣಾ ಅಸಮರ್ಪಕ ಕಾರ್ಯಗಳಿಗೆ ಶಿಕ್ಷೆಗೊಳಗಾಗಿದ್ದರು. ಟ್ರಂಪ್ ಜೊತೆ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದ ಅಶ್ಲೀಲ ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ 2016ರ ಚುನಾವಣೆಯಲ್ಲಿ ಹಣ ಪಾವತಿಸಿದ ಆರೋಪ ಅವರ ಮೇಲಿತ್ತು. ಮೈಕೆಲ್ ಕೋಹೆನ್ ಅವರ ತನಿಖೆಯ ಸಮಯದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯು ಅಪರಾಧ ಚಟುವಟಿಕೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಅಧಿಕೃತವಾಗಿ ವರದಿಯಾಗಿದೆ.

2019ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡುವ ಬಗ್ಗೆ ವಿಶೇಷ ವಕೀಲ ಸ್ಪೆಷಲ್ ಕೌನ್ಸಿಲರ್ ರಾಬರ್ಟ್ ಮುಲ್ಲರ್ ಅವರು ತನಿಖಾ ವರದಿಯನ್ನು ಸಲ್ಲಿಸಿದರು. ಆ ವರದಿಯಲ್ಲಿ ಟ್ರಂಪ್‌ಗೆ ಕ್ಲೀನ್ ಚಿಟ್ ನೀಡಲಾಯಿತು. ಆದರೆ ತನಿಖೆಗೆ ಅಡ್ಡಿಯುಂಟುಮಾಡಲು ಡೊನಾಲ್ಡ್ ಟ್ರಂಪ್ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮುಲ್ಲರ್ ಅವರನ್ನು ತಮ್ಮ ಹುದ್ದೆಯಿಂದ ತೆಗೆದುಹಾಕಲು ಟ್ರಂಪ್ ಪ್ರಯತ್ನಿಸಿದರು. ಆ ಸಮಯದಲ್ಲಿ ನ್ಯಾಯಕ್ಕೆ ಅಡ್ಡಿಯುಂಟುಮಾಡಿದ ಕಾರಣಕ್ಕಾಗಿ ಯುಎಸ್ ಸಂಸತ್ತಿನಿಂದ ಡೊನಾಲ್ಡ್ ಟ್ರಂಪ್ ಅವರನ್ನು ದೋಷಾರೋಪಣೆ ಮಾಡಲು ಮುಲ್ಲರ್ ಶಿಫಾರಸು ಮಾಡಿದರು. ಆದಾಗ್ಯೂ ಅಧ್ಯಕ್ಷರನ್ನು ಸಾಮಾನ್ಯ ನ್ಯಾಯದ ಮೂಲಕ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ. ಆದ್ದರಿಂದ ಸಂಸತ್ತು ಟ್ರಂಪ್‌ಗೆ ದೋಷಾರೋಪಣೆ ಮಾಡಲಿಲ್ಲ. ಆದರೆ ಪ್ರತ್ಯೇಕ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ದೋಷಾರೋಪಣೆ ನಡೆಸಲಾಗಿದೆ.

Comments are closed.