ರಾಷ್ಟ್ರೀಯ

ಗುಪ್ತಾಂಗದ ಕೂದಲು ಕತ್ತರಿಸಿದ ಆಧಾರದ ಮೇಲೆ ಪತಿಯ ಅಕ್ರಮ ಸಂಬಂಧ ಪತ್ತೆ ಹಚ್ಚಿದ ಪತ್ನಿ

Pinterest LinkedIn Tumblr

ಲಾಕ್ಡೌನ್ ಅವಧಿಯಲ್ಲಿ ಅನೇಕರ ಮುಖವಾಡ ಬಯಲಾಗಿದೆ. ಪ್ರೀತಿಸಿದಾಕೆಯನ್ನು ಭೇಟಿ ಮಾಡಲಾಗದೆ, ಹೆಂಡತಿ ಜೊತೆ ಅನಿವಾರ್ಯವಾಗಿ ಜೀವನ ನಡೆಸಿದವರು ಅನೇಕ ಮಂದಿ ಇದ್ದಾರೆ.

ಇದೇ ರೀತಿ ಲಾಕ್ ಡೌನ್ ಅವಧಿಯಲ್ಲಿ ಹೆಂಡತಿಯೊಬ್ಬಳು ಪತಿ ಅನೈತಿಕ ಸಂಬಂಧ ಹೊಂದಿದ್ದ ಎಂಬುದನ್ನು ಬಯಲಿಗೆಳೆದಿದ್ದಾಳೆ. ಅದೂ ಆತ ಗುಪ್ತಾಂಗದ ಕೂದಲು ಕತ್ತರಿಸುವ ಆಧಾರದ ಮೇಲೆ! ಅದು ಹೇಗೆ ಅಂತೀರ ಈ ಸ್ಟೋರಿ ಓದಿ.

ಆ ದಂಪತಿ ಸುಖ ಸಂಸಾರ ನಡೆಸುತ್ತಿದ್ದರು. ಓರ್ವ ಮಗ ಕೂಡ ಇದ್ದ. ಆದರೆ, ಇಬ್ಬರ ಲೈಂಗಿಕ ಜೀವನ ಮಾತ್ರ ಸರಿಯಾಗಿರಲಿಲ್ಲ. ರಾತ್ರಿಯಾದರೆ ಹೆಂಡತಿ ಪೂರ್ವಕ್ಕೆ ಗಂಡ ದಕ್ಷಿಣಕ್ಕೆ ತಲೆ ಹಾಕಿ ಮಲಗುತ್ತಿದ್ದರು.

ಆದಾಗ್ಯೂ, ಆಕೆಯ ಪತಿ ತಿಂಗಳಿಗೊಮ್ಮೆ ಕೆಳಭಾಗದ ಕೂದಲನ್ನು ಸ್ವಚ್ಛವಾಗಿ ಕತ್ತರಿಸುತ್ತಿದ್ದನಂತೆ. ಕೇಳಿದರೆ, ಎಲ್ಲ ಕಡೆ ಸ್ವಚ್ಛವಾಗಿಟ್ಟುಕೊಳ್ಳುವುದು ಎಂದರೆ ನನಗೆ ಇಷ್ಟ ಎಂದು ಹೇಳುತ್ತಿದ್ದನಂತೆ.

ಆದರೆ, ಲಾಕ್ ಡೌನ್ ಘೋಷಣೆ ಆಗಿದ್ದೇ ಆಗಿದ್ದು ಆತ ಗುಪ್ತಾಂಗದ ಮೇಲಿನ ಕೂದಲನ್ನು ತೆಗೆದೇ ಇರಲಿಲ್ಲ. ಒಂದು ದಿನ ಹೆಂಡತಿ ಒತ್ತಾಯಕ್ಕೆ ಆತ ಸೆಕ್ಸ್ ಮಾಡಲು ಒಪ್ಪಿದ್ದರೂ ಕೂದಲು ತೆಗೆದಿರಲಿಲ್ಲ.

ಆದರೆ, ಯಾವಾಗ ಲಾಕ್ ಡೌನ್ ಪೂರ್ಣಗೊಂಡಿತೋ ಆತ ಮತ್ತೆ ಕೂದಲು ತೆಗೆಯುವ ಕೆಲಸ ಮುಂದುವರಿಸಿದ್ದ. ಇದರಿಂದ ಆಕೆಗೆ ಒಂದು ವಿಚಾರ ಸ್ಪಷ್ಟವಾಗಿತ್ತು. ನನ್ನ ಪತಿ ಹೊರಗೆ ಬೇರೆ ಯಾರದ್ದೋ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಅದಕ್ಕಾಗಿಯೇ ಆತ ಗುಪ್ತಾಂಗದ ಮೇಲಿನ ಕೂದಲು ತೆಗೆಯುತ್ತಿದ್ದ. ಆದರೆ, ಲಾಕ್ ಡೌನ್ ಅವಧಿಯಲ್ಲಿ ಅವಳನ್ನು ಭೇಟಿ ಆಗಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಸುಮ್ಮನ್ನಿದ್ದ!

ಈ ವಿಚಾರ ಮನಸಿಗೆ ಬಂದಿದ್ದೇ ತಡ ಆಕೆ ಗಂಡನ ಮೇಲೆ ಕೂಗಾಡಿದ್ದಳು. ಗಂಡ ಕೂಡ ಭಯಗೊಂಡು ತಾನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಹೌದು ಎಂದು ಒಪ್ಪಿಕೊಂಡಿದ್ದಾನೆ.

ನಾನು ನನ್ನ ಸಹೋದ್ಯೋಗಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಹೌದು. ಆದರೆ, ಹೆಂಡತಿ ಇದನ್ನು ಈ ರೀತಿ ಪತ್ತೆ ಹಚ್ಚುತ್ತಾಳೆ ಎಂದು ನಾನು ಭಾವಿಸಿರಲಿಲ್ಲ ಎಂದು ಆತ ಅಚ್ಚರಿ ವ್ಯಕ್ತಪಡಿಸಿದ್ದಾನೆ.

Comments are closed.