ಅಂತರಾಷ್ಟ್ರೀಯ

ಟ್ರಂಪ್ ಜೊತೆಗಿನ 15 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್​ಬೈ ಹೇಳಲು ಹೊರಟ 3ನೇ ಪತ್ನಿ ಮೆಲಾನಿಯಾ

Pinterest LinkedIn Tumblr


ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಮುಗಿದಿದೆ. ಇದರೊಂದಿಗೆ ಡೊನಾಲ್ಡ್ ಟ್ರಂಪ್ ಅಧಿಕಾರವೂ ಅಂತ್ಯಗೊಂಡಿದೆ. ಜೋ ಬೈಡನ್ ಈಗ ಅಧ್ಯಕ್ಷರಾದರೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಪಾಧ್ಯಕ್ಷೆಯಾಗಿ ನೇಮಕವಾಗಿದ್ದಾಳೆ.

ಇತ್ತ ಚುನಾವಣೆ ಮುಗಿಯುತ್ತಿದ್ದಂತೆ ಟ್ರಂಪ್ ಸಂಸಾರಿಕ ಜೀವನದಲ್ಲಿ ಬಿರುಗಾಳಿಯೆದ್ದಿದೆ. ಇಷ್ಟ ಪಟ್ಟು ಮದುವೆಯಾಗಿದ್ದ ತನ್ನ ಮೂರನೆಯ ಮನೆಯೊಡತಿ ಮೆಲೆನಿಯಾ ಡೊನಾಲ್ಡ್ ರಿಂದ ದೂರವಾಗುತ್ತಿದ್ದಾರೆ. ಇದು ಮೊದಲೇ ಚುನಾಚಣೆಯಲ್ಲಿ ಸೋತ ಟ್ರಂಪ್ ಗೆ ಮತ್ತಷ್ಟು ಆಘಾತವಾಗಿದೆ. ಚುನಾವಣಾ ಫಲಿತಾಂಶಕ್ಕೇ ಕಾಯುತ್ತಿದ್ದ ಪತ್ನಿ
ಡೈವೋರ್ಸ್ ನೀಡಲು ಮುಂದಾಗಿದ್ದಾರೆ.

ಮೆಲಾನಿಯಾ ವೈಟ್​ ಹೌಸ್​ನಲ್ಲಿ 4 ವರ್ಷ ಫಸ್ಟ್​ ಲೇಡಿಯಾಗಿ ಮಿಂಚಿದ್ದರು. ಆಗ ಟ್ರಂಪ್ ರ ಒರಟು ವರ್ತನೆಯಿಂದ ಬೇಸತ್ತ ಮಲಾನಿಯಾ ಈಗ ವಿಚ್ಛೇದನಕ್ಕೆ ಮುಂದಾಗಿದ್ದಾರೆ. 6 ತಿಂಗಳ ಹಿಂದೆಯೇ ವಿಚ್ಚೇದನಕ್ಕೆ ನಿರ್ಧರಿಸಿದ್ದ ಮೆಲಾನಿಯಾ, ಚುನಾವಣೆ ಫಲಿತಾಂಸಕ್ಕಾಗಿ ಕಾಯುತ್ತಿದ್ದರು. ಇಲ್ಲಿಗೆ ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾರ 15 ವರ್ಷಗಳ ದಾಂಪತ್ಯ ಜೀವನಕ್ಕೆ ಮೆಲಾನಿಯಾ ಗುಡ್​ಬೈ ಹೇಳಿದಂತಾಗುತ್ತದೆ.

Comments are closed.