
ವಾಷಿಂಗ್ಟನ್: ಇಲ್ಲೊಂದು ಗಂಡ-ಹೆಂಡತಿ ತಮಗೆ ಹೆಣ್ಣು ಮಗು ಬೇಕು ಎಂಬ ಕಾರಣಕ್ಕಾಗಿ ಬರೋಬ್ಬರಿ 14 ಗಂಡು ಮಕ್ಕಳಿಗೆ ಜನ್ಮ ನೀಡಿ, ಕೊನೆಗೂ ಈ ಕುಟುಂಬಕ್ಕೆ ಈಗ ಹೆಣ್ಣು ಮಗುವೊಂದು ಬಂದಿದೆ.
ಅಮೆರಿಕದ ಮಿಚಿಗಾನ್ ರಾಜ್ಯದಲ್ಲಿ ಈ ಘಟನೆ ನಡೆದಿದ್ದು, ಕಟೇರಿ ಶ್ವಾಂಡ್ಟ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹುಟ್ಟಿದ ಸಮಯದಲ್ಲಿ 3.4 ಕೆ.ಜಿ ತೂಕವಿದ್ದ ಮ್ಯಾಗಿ ಜಯ್ನೆಯನ್ನು 14 ಸಹೋದರರು ಸ್ವಾಗತಿಸಿದ್ದಾರೆ. ಗ್ರ್ಯಾಂಡ್ ರಾಪಿಡ್ಸ್ ನ ಮರ್ಸಿ ಹೆಲ್ತ್ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಮ್ಯಾಗಿ ಜನಿಸಿದ್ದಾಳೆ.
ಕಟೇರಿ ಹಾಗೂ ಇವರ ಪತಿ ಜೇ ಇಬ್ಬರೂ 45 ವರ್ಷದವರಾಗಿದ್ದಾರೆ. ಹೆಣ್ಣು ಮಗು ಜನಿಸಿದ್ದಕ್ಕೆ ಅತೀವ ಸಂತಸಪಟ್ಟಿದ್ದಾರೆ. ನಾವು ತುಂಬಾ ಸಂತೋಷವಾಗಿದ್ದೇವೆ. ಮ್ಯಾಗಿ ಜಯ್ನೆಯನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೆವು. ಈ ವರ್ಷ ನಮಗೆ ಹಲವು ಕಾರಣಗಳಿಂದಾಗಿ ತುಂಬಾ ನೆನಪಿನಲ್ಲಿ ಇರುತ್ತದೆ. ಆದರೆ ಮ್ಯಾಗಿ ನಮಗೆ ಬಹುದೊಡ್ಡ ಉಡುಗೊರೆ. ನಾವು ಇದನ್ನು ಊಹಿಸಿರಲಿಲ್ಲ ಎಂದು ಜೇ ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ಕುಟುಂಬ ಬೆಳೆದಿರುವ ಪರಿಯನ್ನು ದಂಪತಿ ಹಂಚಿಕೊಂಡಿದ್ದು, ಕುಟುಂಬವು 14 ಔಟ್‍ರೋರ್ಸ್‍ಮೆನ್ ಎಂಬ ಲೈವ್ ಸ್ಟ್ರೀಮಿಂಗ್ ಹೊಂದಿದೆ. ಇದನ್ನು ಅವರು ಮರುನಾಕರಣ ಮಾಡಲಿದ್ದಾರೆ. ಈ ಕುರಿತು ಮ್ಯಾಗಿಯ ಹಿರಿಯ ಅಣ್ಣ 28 ವರ್ಷದ ಟೈಲರ್ ಈ ಕುರಿತು ಮಾತನಾಡಿ, 14 ಮಕ್ಕಳು ಜನಿಸಿದ ಮೇಲೆ ಹೆಣ್ಣು ಮಗು ಜನಿಸುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ನಮ್ಮ ತಾಯಿ ಮತ್ತೆ ಪಿಂಕ್ ಉಡುಗೆ ತೊಡುತ್ತಾರೆ ಎಂದುಕೊಂಡಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಟೈಲರ್ ಸಹ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಹೆತ್ತವರ ಜಮೀನಿನಿಂದ ಸುಮಾರು 20 ನಿಮಿಷಗಳ ದೂರದಲ್ಲಿ ಮನೆ ಖರೀದಿಸಿದ್ದಾರೆ.
ಕಟೇರಿ ಹಾಗೂ ಜೇ ಗೇಲಾರ್ಡ್ ಹೈ ಸ್ಕೂಲ್ ಹಾಗೂ ಗೇಲಾರ್ಡ್ ಸೇಂಟ್ ಮೇರಿಸ್ ಹೈ ಸ್ಕೂಲ್ ನಿಂದ ಡೇಟಿಂಗ್ ಮಾಡುತ್ತಿದ್ದರು. 1993ರಲ್ಲಿ ಇಬ್ಬರೂ ಫೇರಸ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಸೇರಿದ್ದಾರೆ. ಪದವೀಧರರಾಗುವ ಮೊದಲೇ ಅವರಿಗೆ ಮೂವರು ಗಂಡು ಮಕ್ಕಳು ಜನಿಸಿದ್ದರು. ಕುಟುಂಬ ಬೆಳೆಯುತ್ತಿದ್ದರೂ ದಂಪತಿ ಮಾತ್ರ ಓದನ್ನು ಮುಂದುವರಿಸಿದ್ದರು.
ಕಟೇರಿ ಅವರು ವೇಲ್ಲಿ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಕಾರ್ಯದಲ್ಲಿ ಮಾಸ್ಟರ್ ಡಿಗ್ರಿ ಪೂರೈಸಿದ್ದಾರೆ. ಇದೇ ವೇಳೆ ಜೇ ಅವರು ವೆಸ್ಟರ್ನ್ ಮಿಚಿಗನ್ ವಿಶ್ವವಿದ್ಯಾಲಯದ ಥಾಮಸ್ ಎಂ ಕೂಲೆ ಲಾ ಶಾಲೆಯಲ್ಲಿ ಕಾನೂನು ಪದವಿ ಪಡೆದಿದ್ದಾರೆ, ಜೇ ವೃತ್ತಿಯಲ್ಲಿ ವಕೀಲರಾಗಿದ್ದು ಭೂ ಸಮೀಕ್ಷೆ ವ್ಯವಹಾರ ಹೊಂದಿದ್ದಾರೆ.
Comments are closed.