
ಔರ್ ಕಿತನಿ ಹಿಂದೂ ಬಹನೆ ಲವ್ ಜಿಹಾದ್ ಕಿ ಬಲಿ ಚಢೇಗಿ ?’ ಈ ಕುರಿತು ವಿಶೇಷ ವಿಚಾರ ಸಂಕಿರಣ
‘ಹಿಂದೂಫೋಬಿಯಾ’ ಮತ್ತು ‘ಲವ್ ಜಿಹಾದ್’ಗೆ ಸದಾ ಕುಮ್ಮಕ್ಕು ನೀಡುತ್ತಾ ಬಂದಿದೆ ಈ ಬಾಲಿವುಡ್ ! – ಬಾಲಿವುಡ್ ನಟಿ ಪಾಯಲ್ ರೊಹತಗಿ ಇವರ ಪ್ರಖರ ಹೇಳಿಕೆ
ಬಾಲಿವುಡ್‌ನಲ್ಲಿ ಪರಸ್ಪರರಿಗೆ ‘ಇನ್ಶಾಅಲ್ಲಾಹ’ ಎಂದು ಸರ್ವಸಾಮಾನ್ಯವಾಗಿ ಹೇಳಲಾಗುತ್ತದೆ; ಆದರೆ ‘ಜಯ ಶ್ರೀರಾಮ’ ಎನ್ನುವುದನ್ನು ನಾನು ಕೇಳಿಲ್ಲ. ಬಾಲಿವುಡ್‌ನಲ್ಲಿ ಖಾನಗಳ ಗುಂಪು ಹಿಂದೂ ಹೆಣ್ಣು ಮಕ್ಕಳೊಂದಿಗೆ ಮದುವೆಯಾಗಿ ‘ಲವ್ ಜಿಹಾದ್’ಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದ್ದಾರೆ.
‘ತನಿಷ್ಕ’ ಮತ್ತು ‘ಸರ್ಫ್ ಎಕ್ಸೆಲ್’ ಇವುಗಳಂತಹ ಜಾಹೀರಾತುಗಳು ‘ಲವ್ ಜಿಹಾದ್’ನ ಉದಾಹರಣೆಗಳಾಗಿವೆ. ‘ಲವ್ ಜಿಹಾದ್’ ಬಗ್ಗೆ ಮಾತನಾಡಲೇ ಬೇಕಿದೆ. ಹಿಂದೂ ಜನಜಾಗೃತಿ ಸಮಿತಿಯ ಈ ಕಾರ್ಯಕ್ರಮದಿಂದ ಹಿಂದೂಗಳಿಗೆ ಒಂದು ಉತ್ತಮ ವೇದಿಕೆ ದೊರಕಿದೆ.
ನಸಿರುದ್ಧಿನ ಶಾಹರಂತಹವರು ‘ಪಾಕಿಸ್ತಾನದಲ್ಲಿರಲು ಒಳ್ಳೆಯದೆನಿಸುತ್ತದೆ’, ಎಂದು ಹೇಳುತ್ತಾರೆ. ಇಂತಹರಿಗೆ ಹಿಂದೂಗಳ ಹತ್ಯೆಯಾಗುತ್ತಿರುವ ಬಗ್ಗೆ ಯಾವುದೇ ಬೆಲೆ ಇಲ್ಲ. ಇವರ ಈ ಸಂಕುಚಿತವೃತ್ತಿಯನ್ನು ಬಯಲಿಗೆಳೆಯಲೇ ಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ರಮೇಶ ಶಿಂದೆ ಆಗ್ರಹಿಸಿದ್ದಾರೆ.
ಬಾಲಿವುಡ್‌ನಲ್ಲಿರುವ ಹಿಂದೂಗಳಿಗೆ ತಮ್ಮ ಧರ್ಮದ ಬಗ್ಗೆ ಅಭಿಮಾನವೆನಿಸುವುದಿಲ್ಲ. ಬಾಲಿವುಡ್ ಸತತವಾಗಿ ‘ಹಿಂದೂಫೋಬಿಯಾ’ ಮತ್ತು ‘ಲವ್ ಜಿಹಾದ್’ಗಳಿಗೆ ಪ್ರೋತ್ಸಾಹ ನೀಡಿದೆ, ಎಂಬಂತಹ ಪ್ರಖರ ಹೇಳಿಕೆಯನ್ನು ಹಿಂದಿ ಚಲನಚಿತ್ರದ ನಟಿ ಪಾಯಲ್ ರೋಹತಗಿ ಇವರು ನೀಡಿದ್ದಾರೆ ಎಂದವರು ಆರೋಪಿಸಿದ್ದಾರೆ.
ಹರಿಯಾಣದಲ್ಲಿ ‘ಲವ್ ಜಿಹಾದ್’ನಿಂದ ನಿಕಿತಾ ತೊಮರ ಇವಳ ಹತ್ಯೆಯಾದ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯು ‘…ಔರ್ ಕಿತನಿ ಹಿಂದೂ ಬಹನೆ ಲವ್ ಜಿಹಾದ್ ಕಿ ಬಲಿ ಚಢೇಗಿ ? (ಇನ್ನೆಷ್ಟು ಹಿಂದೂ ಭಗಿನಿಯರು ಲವ್ ಜಿಹಾದ್‌ಗೆ ಬಲಿಯಾಗುವರು ?’) ಎಂಬ ಕುರಿತು ವಿಶೇಷ ವಿಚಾರಸಂಕಿರಣವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಅವರು ಮಾತನಾಡುತ್ತಿದ್ದರು.
ಈ ಕಾರ್ಯಕ್ರಮವನ್ನು ಫೇಸಬುಕ್ ಮತ್ತು ಯೂ-ಟ್ಯೂಬ್‌ಗಳ ಮಾಧ್ಯಮಗಳಿಂದ 32084 ಜನರು ಪ್ರತ್ಯಕ್ಷ ನೋಡಿದರು ಮತ್ತು 65990 ಜನರವರೆಗೆ ಈ ಮಾಹಿತಿ ತಲುಪಿತು.
ಹಿಂದೂ ಯುವತಿಯರು ಮುಸಲ್ಮಾನ ಯುವಕರ ಪ್ರೇಮದಲ್ಲಿ ಸಿಲುಕಿದರೆ ನಡೆಯುತ್ತದೆ. ಆದರೆ ‘ರಾಹುಲ ರಾಜಪೂತ’ ಈ ಹಿಂದೂ ಯುವಕನು ಓರ್ವ ಮುಸಲ್ಮಾನ ಯುವತಿಯನ್ನು ಪ್ರೀತಿಸುತ್ತಿದ್ದರೆ ಅವನನ್ನು ಏಕೆ ಕೊಲ್ಲಲಾಗುತ್ತದೆ ? ಆಗ ಎಲ್ಲಿರುತ್ತದೆ ನಿಮ್ಮ ‘ಸೆಕ್ಯುಲರ್‌ವಾದ’ ?, ಕರಿನಾ ಕಪೂರಳು ಸೈಫ್ ಅಲಿ ಖಾನನೊಂದಿಗೆ ಮದುವೆಯಾದರೆ ‘ತೈಮೂರ’ನೇ ಜನಿಸುತ್ತಾನೆ.
ಹಿಂದೂಗಳಿಗೆ ಛತ್ರಪತಿ ಶಿವಾಜಿ ಮಹಾರಾಜರು ಬೇಕಾಗಿದ್ದರೆ, ಅವರಿಗೆ ಜನ್ಮ ನೀಡಿದ ಜೀಜಾಮಾತೆಯು ಸಿದ್ಧವಾಗಬೇಕು. ನಿಕಿತಾ ತೋಮರ ಇವಳಿಗೆ ನ್ಯಾಯ ನೀಡಲು ಎಲ್ಲ ಹಿಂದೂಗಳು ಒಟ್ಟಾಗಬೇಕು. ‘ಲವ್ ಜಿಹಾದ್’ನ್ನು ತಡೆಗಟ್ಟಲು ದೇಶದಲ್ಲಿ ‘ನಿಕಿತಾ ಕಾಯದಾ’ ಆಗಬೇಕು’ ಎಂದು ಶಿಂದೆ ಹೇಳಿದರು.
ಕೇರಳದ ಆರ್ಷ ವಿದ್ಯಾ ಸಮಜಮ್‌ನ ಕು. ಶ್ರುತಿ ಓ. ಇವರು ಮಾತನಾಡುತ್ತಾ, ‘ಕೇರಳದಲ್ಲಿ ಲವ್ ಜಿಹಾದ್ ಬಗ್ಗೆ ಮಾಹಿತಿ ಇರುವ 4 ಸಾವಿರಗಳಿಗಿಂತ ಹೆಚ್ಚು ಪ್ರಕರಣಗಳಿವೆ. ‘ಲವ್ ಜಿಹಾದ್’ನಲ್ಲಿ ಸಿಲುಕಿರುವ ಹೆಣ್ಣುಮಕ್ಕಳಿಗೆ ನಾವು ಒಂದು ಪಠ್ಯಕ್ರಮದ ಮೂಲಕ ಧರ್ಮಶಿಕ್ಷಣವನ್ನು ನೀಡಿ ಪುನಃ ಕರೆದು ತಂದಿದ್ದೇವೆ. ಧರ್ಮಶಿಕ್ಷಣವೇ ಹೆಣ್ಣುಮಕ್ಕಳನ್ನು ‘ಲವ್ ಜಿಹಾದ್’ನಿಂದ ಕಾಪಾಡಬಹುದು’ ಎಂದು ಹೇಳಿದರು.
‘ಹಿಂದೂ ಹೆಲ್ಪ್‌ಲೈನ್’ನ ಪ್ರಾಂತ ಪ್ರಧಾನಸಚಿವ ಶ್ರೀ. ಬಿನೀಲ ಸೋಮಸುಂದರಮ್ ಇವರು ಮಾತನಾಡುತ್ತಾ, ‘ಲವ್ ಜಿಹಾದ್’ ಇದು ಭಯೋತ್ಪಾದಕರಿಂದ ಪೋಷಿಸಲಾಗುವ ಒಂದು ಕಾರ್ಯತಂತ್ರವಾಗಿದೆ. ಇದರಲ್ಲಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದಂತಹ ಸಂಘಟನೆಗಳು ಸಕ್ರಿಯವಾಗಿವೆ’ ಎಂದು ಹೇಳಿದರು.
ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅಮಿತಾ ಸಚದೇವಾ ಇವರು ಈ ವೇಳೆ ಮಾತನಾಡುತ್ತಾ, ಕೇರಳ ಉಚ್ಚ ನ್ಯಾಯಾಲಯವು ‘ಲವ್ ಜಿಹಾದ್’ ಮೂಲಕ ನಡೆಯುವ ಮತಾಂತರವನ್ನು ತಡೆಗಟ್ಟಲು ಕಾನೂನಿನ ಆವಶ್ಯಕತೆಯ ಬಗ್ಗೆ ಪ್ರತಿಪಾದಿಸಿದೆ. ‘ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್’ನಿಂದಾಗಿ ಮತಾಂಧರಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆದ್ದರಿಂದ ‘ಲವ್ ಜಿಹಾದ್’ ಮಾಡುವಾಗ ಅವರ ಮನಸ್ಸಿನಲ್ಲಿ ಕಾನೂನಿನ ಬಗ್ಗೆ ಭಯವಿರುವುದಿಲ್ಲ’ ಎಂದು ಹೇಳಿದರು.
ದೆಹಲಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ‘ರಣರಾಗಿಣಿ’ ಶಾಖೆಯ ವಕ್ತಾರರಾದ ಪ್ರಾ. (ಸೌ.) ಸಂದೀಪ ಕೌರ ಮುಂಜಾಲ ಇವರು ಮಾತನಾಡುತ್ತಾ, 30 ವರ್ಷಗಳಿಂದ ನಾನು ಪ್ರಾಧ್ಯಾಪಕಿಯಾಗಿದ್ದೇನೆ. ಮತಾಂಧರ ಮಕ್ಕಳು ‘ಲವ್ ಜಿಹಾದ್’ಗಾಗಿ ಪ್ರಯತ್ನಿಸುತ್ತಿರುತ್ತಾರೆ; ಆದರೆ ಹಿಂದೂ ಪಾಲಕರಿಗೆ ‘ಲವ್ ಜಿಹಾದ್’ ಕುರಿತು ಮಾಹಿತಿಯೇ ಇರುವುದಿಲ್ಲ. ಆದ್ದರಿಂದ ಅವರಿಗೆ ಅವಕಾಶ ಸಿಗುತ್ತದೆ’ ಎಂದರು.
ವರದಿ ಕೃಪೆ : ಹಿಂದೂ ಜನಜಾಗೃತಿ ಸಮಿತಿ
Comments are closed.