ಕರಾವಳಿ

ಮನೆಯೆದುರು ನಿಲ್ಲಿಸಿದ್ದ ಆಟೋ ರಿಕ್ಷಾ ಕದ್ದ ಕಳ್ಳರು..!

Pinterest LinkedIn Tumblr

ಉಡುಪಿ: ಮನೆ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾವನ್ನು ಕಳ್ಳರು ಕದ್ದ ಘಟನೆ ಮಣಿಪಾಲದ ಶಿವಳ್ಳಿ ಗ್ರಾಮದ ಪೇರಂಪಳ್ಳಿಯಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಇಲ್ಲಿನ ನಿವಾಸಿ ಶಂಕರ ಪೂಜಾರಿ (52) ಎನ್ನುವರು ತನ್ನ KA-20-AA-5459 ನೇ ಆಟೋ ರಿಕ್ಷಾವನ್ನು ಮನೆಯ ಬಳಿ ಬೀಗ ಹಾಕಿ ನಿಲ್ಲಿಸಿದ್ದು ಮಾರನೇ ದಿನ ಬೆಳಿಗ್ಗೆ ನೋಡಿದಾಗ ಆಟೋ ರಿಕ್ಷಾ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿದ್ದಾರೆ. ಕಳವಾದ ಆಟೋ ರಿಕ್ಷಾದ ಮೌಲ್ಯ 2,50,000 ರೂಪಾಯಿ ಆಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.