ಕರಾವಳಿ

ಬ್ಯಾಂಕಿಗೆ ಹಣ ಕಟ್ಟಲು ಹೋದ ಯುವತಿ ನಾಪತ್ತೆ : ಮಾಹಿತಿ ಸಿಕ್ಕಿದರೆ ಇಲ್ಲಿಗೆ ಕರೆ ಮಾಡಿ

Pinterest LinkedIn Tumblr

ಮಂಗಳೂರು ನವೆಂಬರ್ 03 : ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯ ಮನ್ನಬೆಟ್ಟು ಗ್ರಾಮದ ಮುಂಚಿಕಾಡಿನ ಪ್ರೀತಿ (25) ಎಂಬ ಯುವತಿಯು ನವೆಂಬರ್ 1 ರಂದು ಬ್ಯಾಂಕಿಗೆ ಹಣ ಕಟ್ಟಲು ಹೋದವಳು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿದ್ದಾಳೆ.

5 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ದುಂಡು ಮುಖ, ಕುಂಕುಮ ಬಣ್ಣದ ಚೂಡಿದಾರ್ ಧರಿಸಿರುವ ಕನ್ನಡ ಮತ್ತು ತುಳು ಭಾಷೆ ಮಾತನಾಡುವ ಈ ಯುವತಿಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಠಾಣಾಧಿಕಾರಿ, ಮೂಲ್ಕಿ ಪೊಲೀಸ್ ಠಾಣೆ, ದೂ. ಸಂಖ್ಯೆ: 0824-2290533, 9480805332, 9480805359, ಮಂಗಳೂರು ನಗರ ಕಂಟ್ರೋಲ್ ರೂಮ್ 0824-2220800 ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.