ಕರಾವಳಿ

ಭಟ್ಕಳ: ಬಲೆಗೆ ಬಿದ್ದ 700 ಕೆಜಿ ತೊರ್ಕೆ ಮೀನು!

Pinterest LinkedIn Tumblr


ಭಟ್ಕಳ: ಇತ್ತೀಚೆಗೆ ತಾಲೂಕಿನಲ್ಲಿ ಮೀನುಗಾರಿಕಾ ಚಟುವಟಿಕೆಗಳು ಚುರುಕುಗೊಂಡಿದ್ದು, ಬೃಹದಾಕಾರಾದ ತೊರ್ಕೆ ಮೀನುಗಳು (ರೇ ಫಿಶ್‌) ಬಲೆಗೆ ಬಿದ್ದು ಕುತೂಹಲ ಮೂಡಿಸಿದೆ.

ಪ್ರಭಾಕರ ಖಾರ್ವಿ ಒಡೆತನದ ರಾಜಶ್ರೀ ಬೋಟಿಗೆ 700 ಕೆಜಿಗೂ ಅಧಿಕ ತೂಕದ ಒಂದು ರೇ ಫಿಶ್‌ ಸಿಕ್ಕಿದ್ದರೆ, ಸುಧಾಕರ ಖಾರ್ವಿ ಒಡೆತನದ ರಾಧಾಕೃಷ್ಣ ಹೆಸರಿನ ಬೋಟಿಗೆ ಸರಿಸುಮಾರು 500 ಕೆಜಿಗೂ ಅಧಿಕ ತೂಕದ 12 ಹಾಗೂ ಕೇಶವ ಮೊಗೇರ ಮಾಲಿಕತ್ವದ ಜಯದುರ್ಗಾ ಹೆಸರಿನ ಬೋಟಿಗೆ ಸುಮಾರು 500 ಕೆಜಿಗೂ ಅಧಿಕ ತೂಕದ 11 ರೇ ಫಿಶ್‌ ಸಿಕ್ಕಿದೆ.

ಈ ಮೀನುಗಳು ಭಾರಿ ಗಾತ್ರ ಹಾಗೂ ತೂಕವನ್ನು ಹೊಂದಿರುವ ಕಾರಣ ಬೋಟಿನಿಂದ ದಡಕ್ಕೆ ತರಲು ಕ್ರೇನ್ ಅ‌ನ್ನು ತರಿಸಿಕೊಳ್ಳಲಾಯಿತು. ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ರೇ ಫಿಶ್‌ಗಳನ್ನು ನೋಡಲು ದಡದಲ್ಲಿ ಮುಗಿ ಬಿದ್ದಿರುವುದು ಕಂಡು ಬಂತು.

Comments are closed.