
ಮುಂಬೈ: 2020 ಮಾ.1 ರಿಂದ ಆ.31ರ ವರೆಗಿನ ಸಾಲಗಾರರ (ಇಎಂಐ) ಚಕ್ರ ಬಡ್ಡಿ ಮನ್ನಾ ಮಾಡುವ ಸರ್ಕಾರದ ಯೋಜನೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆ ಹೊರಡಿಸಿದೆ.
ಜೊತೆಗೆ, ಎಲ್ಲಾ ಸಾಲ ನೀಡುವ ಸಂಸ್ಥೆಗಳಿಗೆ ನಿಗದಿತ ಸಮಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆರ್ ಬಿಐ ಸೂಚನೆ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಆರ್ಬಿಐ, ಸರ್ಕಾರ ಅಕ್ಟೋಬರ್ 23, 2020 ರಂದು ನಿಗದಿತ ಸಾಲ ಖಾತೆಗಳಲ್ಲಿ (2020 ಮಾ.1 ರಿಂದ ಆ.31) ಸಾಲಗಾರರಿಗೆ ಆರು ತಿಂಗಳ ಕಾಲ ಚಕ್ರ ಬಡ್ಡಿ ಮತ್ತು ಸರಳ ಬಡ್ಡಿ ನಡುವಿನ ವ್ಯತ್ಯಾಸವನ್ನು ಎಕ್ಸ್-ಗ್ರೇಷಿಯಾ ಪಾವತಿ ನೀಡುವ ಯೋಜನೆ ಪ್ರಕಟಿಸಿದೆ.
ಇದರ ಅನುಸಾರ ಮಾರ್ಚ್ 1 ರಿಂದ ಆಗಸ್ಟ್ 31ರವರೆಗಿನ ಅವಧಿಗೆ ಆಯಾ ಸಾಲ ನೀಡುವ ಸಂಸ್ಥೆಗಳಿಂದ ಸರಳ ಬಡ್ಡಿ ಮತ್ತು ಸಂಯುಕ್ತ ಬಡ್ಡಿ ನಡುವಿನ ವ್ಯತ್ಯಾಸವನ್ನು ಜಮಾ ಮಾಡುವ ಮೂಲಕ ಕೆಲವು ವರ್ಗದ ಸಾಲಗಾರರಿಗೆ ಎಕ್ಸ್-ಗ್ರೇಷಿಯಾ ಪಾವತಿ ಕಡ್ಡಾಯಗೊಳಿಸುತ್ತದೆ ” ಎಂದಿದೆ.
ಈ ಯೋಜನೆ ಅನುಸಾರ ಸರ್ಕಾರ ಚಕ್ರ ಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸವನ್ನು ಪಾವತಿಸಲಿದೆ. ಬಡ್ಡಿಯ ಮೇಲಿನ ಬಡ್ಡಿಯ ಎಕ್ಸ್-ಗ್ರೇಷಿಯಾ ಪಾವತಿ ಆರು ತಿಂಗಳ ಕಾಲ ಅನ್ವಯವಾಗಲಿದೆ ಮತ್ತು ಇದು ಆಯ್ದ ನಿರ್ದಿಷ್ಟ ಸಾಲಗಳಿಗೆ ಸೀಮಿತವಾಗಿರಲಿದೆ.
ಕೆಲ ದಿನಗಳ ಹಿಂದೆ ಈ ಯೋಜನೆ ಜಾರಿಗೆ ತರುವ ಕುರಿತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.
“ನಿಗದಿತ ಕಾಲಮಿತಿಯೊಳಗೆಯೇ ಎಲ್ಲ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್ಗಳು ಚಕ್ರ ಬಡ್ಡಿ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ಆರ್ಬಿಐ ತನ್ನ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಮೊರಟೋರಿಯಂ ಆಯ್ಕೆ ಮಾಡದವರಿಗೂ ಯೋಜನೆ ಅನ್ವಯಿಸುತ್ತಿದ್ದು, ಅವರಿಗೆ ಉತ್ತೇಜನ ರೂಪದಲ್ಲಿ (ಕ್ಯಾಶ್ಬ್ಯಾಕ್) ಚಕ್ರ ಬಡ್ಡಿಯ ಮೊತ್ತ ನವೆಂಬರ್ 5ರೊಳಗೆ ಮರು ಪಾವತಿಯಾಗಲಿದೆ.
Comments are closed.