ರಾಷ್ಟ್ರೀಯ

ಪುಟಾಣಿಗೆ ಮೆಹಂದಿ ಹಾಕಿ ಸಂಭ್ರಮಿಸಿದ ನಟಿ ಸಾಯಿಪಲ್ಲವಿ

Pinterest LinkedIn Tumblr


ಉತ್ತರ ಪ್ರದೇಶ ಪುಟಾಣಿಗಳಿಗೆ ಮೆಹಂದಿ ಹಾಕಿ ನಟಿ ಸಾಯಿ ಪಲ್ಲವಿ ಖುಷಿಗೆ ಕಾರಣವಾಗಿದ್ದಾರೆ.

ಇಲ್ಲಿನ ಸೋನ್ಭದ್ರದ ಪೆಪ್ರಿ ನಗರಕ್ಕೆ ತೆರಳಿರುವ ಸಹಜ ಸುಂದರಿ ಸಾಯಿ ಪಲ್ಲವಿ ಇಲ್ಲಿನ ಚಿಣ್ಣರಿಗೆ ಮೆಹಂದಿ ಹಚ್ಚಿ ಸಂಭ್ರಮಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ‘ಪೆಪ್ರಿ ಪಿಲ್ಲಸ್’​ (ಪೆಪ್ರಿ ಮಕ್ಕಳು) ಎಂದು ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ತಮ್ಮ ಚಿತ್ರ ‘ಲವ್​ ಸ್ಟೋರಿ’ ಚಿತ್ರದ ಚಿತ್ರೀಕರಣಕ್ಕಾಗಿ ಇಲ್ಲಿಗೆ ತೆರಳಿದ್ದಾರೆ. ಈ ವೇಳೆ ಸಿಕ್ಕ ಬಿಡುವಿನ ಸಮಯದಲ್ಲಿ ಚಿಕ್ಕ ಮಕ್ಕಳಿಗೆ ಮೆಹಂದಿ ಹಾಕಿ ಸಂತೋಷ ಪಟ್ಟಿದ್ದಾರೆ.

ನೇರ, ನಿರ್ಭಿತ ನಡೆಯಿಂದ ಚಿತ್ರರಂಗದಲ್ಲಿ ಸಾಯಿ ಪಲ್ಲವಿ ಹೆಸರು ಗಳಿಸಿದವರು. ಈ ಹಿಂದೆ ಕೋಟಿ ಕೊಟ್ಟರೂ ಫೇರ್​ನೆಸ್​ ಕ್ರೀಂ ಜಾಹೀರಾತಲ್ಲಿ ನಟಿಸುವುದಿಲ್ಲ ಎಂದು ಸುದ್ದಿಯಾಗಿದ್ದರು. ವೈದ್ಯೆ ಪದವಿ ಪಡೆದಿರುವ ಸಾಯಿ ಪಲ್ಲವಿ, ತೂಕದ ಪಾತ್ರಗಳಲ್ಲಿ ಮಾತ್ರ ನಟಿಸುವ ಮೂಲಕ ಗಮನ ಸೆಳೆದವರು.

ಕೊರೋನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸದ್ಯ ಶೂಟಿಂಗ್​ ಆರಂಭಿಸಿರುವ ಸಾಯಿ ಪಲ್ಲವಿ ಮಾಸ್ಕ್​ ಧರಿಸಿ ಮಕ್ಕಳಿಗೆ ಗೋರಂಟಿ ಹಾಕಿದ್ದಾರೆ. ಇದೇ ವೇಳೆ ತಮ್ಮ ಈ ಕೆಲಸಕ್ಕೆ ಮಕ್ಕಳು ಖುಷಿ ಪಟ್ಟಿದ್ದಾರೆ ಎಂದು ಕೂಡ ಇನ್ಸ್ಟಾಗ್ರಾಂನಲ್ಲಿ ಬರೆದು ಕೊಂಡಿದ್ದಾರೆ. ಸಾಯಿ ಪಲ್ಲವಿಯ ಈ ಫೋಟೋಗೆ ನಟಿ ಸಮಂತಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ನಟಿ ಅನುಪಮಾ ಪರಮೇಶ್ವರ್​ ಕೂಡ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಟ ನಾಗಾ ಚೈತನ್ಯ ಜೊತೆ ಇದೇ ಮೊದಲ ಬಾರಿ ಸಾಯಿ ಪಲ್ಲವಿ ‘ಲವ್​ ಸ್ಟೋರಿ’ ಸಿನಿಮಾ ಮೂಲಕ ಜೊತೆಯಾಗಿದ್ದಾರೆ.

Comments are closed.