
ಮಂಗಳೂರು, ಆಕ್ಟೋಬರ್.23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೆ ದಿನೆ ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ಮೂರೇ ದಿನಗಳ ಅಂತರದಲ್ಲಿ ಇಂದು ಬಂಟ್ವಾಳದಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದೆ.
ರೌಡಿ ಶೀಟರ್ ಫಾರೂಕ್ ಯಾನೆ ಚೆನ್ನ ಫಾರೂಕ್ ಎಂಬಾತನನ್ನು ತಲಾವರಿನಿಂದ ಕಡಿದು ಹತ್ಯೆಗೈಯಲಾಗಿದೆ. ಬಂಟ್ವಾಳ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಆತನ ಸ್ನೇಹಿತನೇ ತಲವಾರಿನಿಂದ ಕಡಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಫಾರೂಕ್ ಹಾಗೂ ಅತನ ಸ್ನೇಹಿತನ ನಡುವೆ ಕೆಲವು ದಿನಗಳ ಹಿಂದೆ ಯಾವೂದೋ ವಿಚಾರದಲ್ಲಿ ಮಾತುಕತೆ ಉಂಟಾಗಿದ್ದು ಇದೇ ವಿಚಾರ ತಾರಾಕ್ಕಕ್ಕೇರಿ ಕೊಲೆ ಮಾಡುವ ತನಕ ಬಂದಿದೆ ಎನ್ನಲಾಗಿದೆ.
ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಎಸ್.ಐ.ಪ್ರಸನ್ನ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮೂರು ದಿನಗಳ ಹಿಂದೆ ತಾನೆ ಬಂಟ್ವಾಳದಲ್ಲಿ ರೌಡಿ ಶೀಟರ್, ಚಿತ್ರ ನಟ ಸುರೇಂದ್ರ ಭಂಡಾರಿ ಬಂಟ್ವಾಳ ಎಂಬವರ ಹತ್ಯೆ ನಡೆದಿತ್ತು. ಆಕ್ಟೋಬರ್ 20ರಂದು ರಾತ್ರಿ ಈ ಹತ್ಯೆ ನಡೆದಿರ ಬೇಕೆಂದು ಶಂಕಿಸಲಾಗಿದೆ. ಘಟನೆ ಆಕ್ಟೋಬರ್ 21ರಂದು ಮಧ್ಯಾಹ್ನ ಬೆಳಕಿಗೆ ಬಂದಿತ್ತು.
ಸುರೇಂದ್ರ ಭಂಡಾರಿ ಬಂಟ್ವಾಳನನ್ನು ಕೂಡ ಹಣಕಾಸು ವಿಚಾರದಲ್ಲಿ ಆತನ ಸ್ನೇಹಿತರೆ ಹತ್ಯೆ ಮಾಡಿರಬೇಕೆಂದು ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದೀಗ ಮೂರೇ ದಿನಗಳ ಅಂತರದಲ್ಲಿ ಇದೇ ಬಂಟ್ವಾಳದಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಇನ್ನೊಂದು ವಿಚಾರವೆನೆಂದರೆ ಇಲ್ಲಿ ಹತ್ಯೆಗೀಡಾದ ಇಬ್ಬರು ರೌಡಿ ಶೀಟರ್ ಎಂಬುವುದು ವಿಶೇಷ.
Comments are closed.