ಕರ್ನಾಟಕ

ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಹಿಂದೂ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Pinterest LinkedIn Tumblr

ಉತ್ತರ ಪ್ರದೇಶ: ಗಂಡನ ಮನೆಯವರು ಕೊಡುವ ಹಿಂಸೆಯನ್ನು ಸಹಿಸಲಾರದೇ ಮತಾಂತರಗೊಂಡ ಯುವತಿಯೊಬ್ಬಳು ನ್ಯಾಯ ಸಿಗದ ಹಿನ್ನೆಲೆಯಲ್ಲಿ ಇತ್ತೀಚಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಮೃತಪಟ್ಟಿದ್ದಾಳೆ.

ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವತಿಯೊಬ್ಬಳು ಗಂಡನ ಮನೆಯವರು ಕೊಡುವ ಹಿಂಸೆಯನ್ನು ಸಹಿಸಲಾರದೇ ನ್ಯಾಯಕ್ಕಾಗಿ ಪೊಲೀಸರ ಮುಂದೆ ಮೊರೆ ಹೋಗೊದ್ದಳು. ಆದರೆ ಪೊಲೀಸರು ಗಂಡನ ಮನೆಯವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರಿಂದ ಮುಖ್ಯಮಂತ್ರಿಗಳನ್ನೇ ಭೇಟಿ ಮಾಡಿ ನ್ಯಾಯಕ್ಕಾಗಿ ಕೋರಬೇಕು ಎಂದುಕೊಂಡಳು. ಆದರೆ ಯುವತಿಗೆ ಅವರನ್ನು ಭೇಟಿಯಾಗಲು ಅವಕಾಶ ಸಿಗಲಿಲ್ಲ.

ಈ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕೋರಿ ಸರ್ಕಾರದ ಗಮನ ಸೆಳೆಯಲು ಉತ್ತರ ಪ್ರದೇಶದ ವಿಧಾನಸಭಾ ಕಟ್ಟಡದ ಎದುರೇ ಕಳೆದ ಎರಡು ದಿನಗಳ ಹಿಂದೆ ತನ್ನ ಮೈಮೇಲೆ ಬೆಂಕಿಹಚ್ಚಿಕೊಂಡಿದ್ದಳು.

ಆದರೆ ವಿಧಾನಸೌಧದ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಈ ಯುವತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ದುರ್ದೈವಿಯನ್ನು ಅಂಜನಾ ತಿವಾರಿ ಅಲಿಯಾಸ್​ ಆಯೇಷಾ ಎಂದು ಗುರುತಿಸಲಾಗಿದೆ.

ಈ ಮೊದಲು ಅಖಿಲೇಶ್​ ಎಂಬುವವರನ್ನು ವಿವಾಹವಾಗಿದ್ದ ಅಂಜನಾ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಈಕೆ ಪ್ರೀತಿಯ ನಾಟಕಕ್ಕೆ ಮರುಳಾಗಿ ಆಸಿಫ್ ಎಂಬವರ ಪ್ರೀತಿಯ ಬಲೆಗೆ ಬಿದ್ದು, ಆಸಿಫ್​ ನನ್ನು ಮದುವೆಯಾದ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಅಂಜನಾಳ ಹೆಸರನ್ನು ಆಯೇಷಾ ಎಂದು ಬದಲಾಯಿಸಲಾಯಿತು.

ಮದುವೆಯಾದ ಬಳಿಕ ಆಸಿಫ್​ ತನ್ನ ಪತ್ನಿಯನ್ನು ಇಲ್ಲಿಯೇ ಬಿಟ್ಟು ಸೌದಿಗೆ ತೆರಳಿದರು. ನಂತರ ಆತ ಇತ್ತ ಸುಳಿಯಲೇ ಇಲ್ಲ. ಈ ಮಧ್ಯೆ ಈಕೆಗೆ ಇವಳ ಅತ್ತೆ-ಮಾವ ಇಬ್ಬರೂ ಸೇರಿ ವಿಪರೀತ ಹಿಂಸೆ ಕೊಡಲು ಶುರುಮಾಡಿದರು ಎನ್ನಲಾಗಿದೆ.

ಹಿಂಸೆಯನ್ನು ತಾಳದೇ ಈಕೆ, ಪೊಲೀಸರಲ್ಲಿ ದೂರು ದಾಖಲಿಸಲು ಹೋದರೆ, ಅವರು ದೂರು ದಾಖಲು ಮಾಡಿಕೊಳ್ಳಲಿಲ್ಲ. ತನಗಾಗಿರುವ ಅನ್ಯಾಯವನ್ನು ಮುಖ್ಯಮಂತ್ರಿ ಎದುರು ಹೇಳಿಕೊಳ್ಳಲು ವಿಫಲ ಯತ್ನ ಮಾಡಿದರು.

ಬಳಿಕ ತನಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ತನಗೆ ಮೋಸ ಮಾಡಿ ನೋವು ಕೊಟ್ಟವರಿಗೆ ಶಿಕ್ಷೆಯಾಗಲೇಬೇಕು ಎಂಬ ಧೃಢ ಸಂಕಲ್ಪದಿಂದ ವಿಧಾನಸಭೆಯ ಕಟ್ಟಡದೆದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು.

ಸಾಯುವ ಮುನ್ನ ಎಲ್ಲಾ ವಿಷಯಗಳನ್ನು ಈಕೆ ಹೇಳಿದ್ದಾಳೆ ಈಕೆ. ಗಂಡನ ಮನೆಯವರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಮತಾಂತರಗೊಂಡು ಅನ್ಯಾಯವಾಗಿ ಬಲಿಯಾಗಿರುವ ಈ ಹೆಣ್ಣುಮಗಳಿಗೆ ನ್ಯಾಯ ದೊರಕ ಬಹುದೆ ಎಂಬ ಶಂಕೆ ವ್ಯಕ್ತವಾಗಿದೆ.

Comments are closed.