ಅಂತರಾಷ್ಟ್ರೀಯ

ಸೂಪರ್ ಮಾರ್ಕೆಟ್​ನಿಂದ ಜ್ಯೂಸ್ ಕಳ್ಳತನ ಮಾಡಿದವಳು ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

Pinterest LinkedIn Tumblr


ಮಹಿಳೆಯೊಬ್ಬಳು ಸೂಪರ್​ ಮಾರ್ಕೆಟ್​ ಗೆ ಶಾಪಿಂಗ್​​ಗೆ ಎಂದು​ ಬಂದವಳು ಕದಿಯುತ್ತಿರುವ ದೃಶ್ಯ ವೈರಲ್ ಆಗಿದೆ. ಕದ್ದ ವಸ್ತುಗಳನ್ನ ತನ್ನ ಒಳ ಉಡುಪಿನಲ್ಲಿ ಮಹಿಳೆ ಅಡಗಿಸಿಕೊಂಡಿದ್ದಾಳೆ. ಆದರೆ ಆಕೆ ಕದಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಷ್ಯಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬೂದು ಬಣ್ಣದ ಬಟ್ಟೆ ಧರಿಸಿರುವ ಮಹಿಳೆ. ಫ್ರೀಜರ್​ನಿಂದ ಜ್ಯೂಸ್​ ಬಾಟಲಿಯನ್ನ ಎತ್ತಿಕೊಂಡಿದ್ದಾಳೆ. ನಂತರ ಅಲ್ಲಿಯೇ ತನ್ನ ಒಳ ಉಡುಪಿನಲ್ಲಿ ಹಾಕಿಕೊಂಡಿದ್ದಾಳೆ. ಆದರೆ ಆಕೆಯ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದೆ.

ಮಹಿಳೆ ಶಾಪಿಂಗ್​ ಮಾಲಿಗೆ 5.20ಕ್ಕೆ ತೆರಳಿದ್ದಾಳೆ. ನಂತರ ಯಾರು ಇಲ್ಲದಿರುವುದನ್ನು ಗಮನಿಸಿ ವಸ್ತುಗಳನ್ನು ಕದಿಯುತ್ತಾಳೆ. ಸುಮಾರು 6 ವಸ್ತುಗಳನ್ನು ತನ್ನ ಒಳ ಉಡುಪಿನಲ್ಲಿ ಹಾಕಿಕೊಂಡಿದ್ದಾಳೆ. ಆದರೆ ಸೂಪರ್​ ಮಾರ್ಕೆಟ್​ ನ ಮಾಲೀಕನಿಗೆ ಈ ಘಟನೆ ತಡವಾಗಿ ಗೊತ್ತಾಗಿದೆ. ಸದ್ಯ ಪೊಲೀಸರು ಮಹಿಳೆಯನ್ನು ಹುಡುಕುತ್ತಿದ್ದಾರೆ.

Comments are closed.