ಮನೋರಂಜನೆ

ಕೆಜಿಎಫ್ 2: ಗೋಲ್ಡ್​ಫೀಲ್ಡ್​ನಲ್ಲಿ ರಾಕಿ-ಸಂಜಯ್ ದತ್ತ್ ಕಾಳಗಕ್ಕೆ ಮುಹೂರ್ತ ಫಿಕ್ಸ್​​..!: ಚಿತ್ರ ಬಿಡುಗಡೆ ಯಾವಾಗ ಗೊತ್ತಾ?

Pinterest LinkedIn Tumblr


ಬೆಂಗಳೂರು: ‘ಕೆಜಿಎಫ್​​’ ಕನ್ನಡ ಸಿನಿ ಇಂಡಸ್ಟ್ರೀಯಲ್ಲಿ ರೆಕಾರ್ಡ್​ ಕ್ರಿಯೇಟ್​​​ ಮಾಡಿರುವ, ಮೆಗಾ ಬ್ಲಾಕ್ ಬಾಸ್ಟರ್​​ ಸಿನಿಮಾ. ಸ್ಯಾಂಡಲ್​ವುಡ್​​ ಟು ನ್ಯಾಷನಲ್​​ ಲೆವೆಲ್​ವರೆಗೆ ರೀಚ್​​ ಆಗಿ ತನ್ನದೇ ಛಾಪು ಮೂಡಿಸಿರುವ ಸಿನಿಮಾ. ಎಲ್ಲೆಲ್ಲೂ ‘ಕೆಜಿಎಫ್​​’ ಅಲೆ ಎಬ್ಬಿಸಿ, ಬಾಕ್ಸ್​​ ಆಫೀಸ್​​​ನಲ್ಲಿ ಅಬ್ಬರಿಸಿ, ಕೋಟಿ-ಕೋಟಿ ಕೊಳ್ಳೆ ಹೊಡೆದ ಸೂಪರ್​​ ಹಿಟ್​​​ ಚಿತ್ರ. ಅಷ್ಟೇ ಅಲ್ಲ ರಾಕಿಂಗ್​ ಸ್ಟಾರ್​ ಯಶ್​​ಗೆ ನ್ಯಾಷನಲ್​ ಸ್ಟಾರ್​​​ ಪಟ್ಟ ಕಟ್ಟಿಕೊಟ್ಟ ಸಿನಿಮಾ ‘ಕೆಜಿಎಫ್​​’.

ಕನ್ನಡಿಗರ ಹೆಮ್ಮೆಯ ‘ಕೆಜಿಎಫ್​​’ ಖದರ್​​ ಈಗಲ್ಲೂ ಸಹಾ ಮುಂದುವರೆದಿದ್ದು, ‘ಕೆಜಿಎಫ್​​ ಚಾಪ್ಟರ್​​-2’ ರಾಷ್ಟ್ರಮಟ್ಟದಲ್ಲಿ ಘರ್ಜಿಸೋಕ್ಕೆ ರೆಡಿಯಾಗ್ತಿದೆ. ಇದರ ಸಿಕ್ವೇಲ್​ ಬರುತ್ತೇ ಅಂತ ಕೇಳದ್ದಾಗಿನಿಂದಲ್ಲೂ, ನಮ್ಮ ದೇಶ ಮಾತ್ರವಲ್ಲದೇ ಪರದೇಶದ ಮಂದಿಯೂ ಸಹಾ ಕಣ್ಣಿಗೆ ಎಣ್ಣೆ ಬಿಟ್ಟಕೊಂಡು ಕಾತುರದಿಂದ ವೈಟ್​​ ಮಾಡ್ತಿದ್ದಾರೆ.

ಈಗಾಲೇ ಟೀಸರ್​, ಫಸ್ಟ್​​ ಲುಕ್​ನಿಂದ ಸದ್ದು ಸುದ್ದಿ ಮಾಡಿದ ‘ಕೆಜಿಎಫ್​-2’ಗೆ ​ಸ್ಟಾರ್ ಹೀರೋ ಸಂಜಯ್ ದತ್ ಎಂಟ್ರಿ ಆಗ್ತಾರೆ ಅಂದಾಗ್ಲೇ ಸಿನಿ ಅಭಿಮಾನಿಗಳಲ್ಲಿ ಕ್ರೇಜ್ ಸೃಷ್ಟಿಸಿತ್ತು.ಇವರ ಫಸ್ಟ್​​ ಲುಕ್​​ಗೆ ಅಭಿಮಾನಿಗಳು ವಾರೇ ವಾ ಅಂದಿದ್ರು. ಆದ್ರೆ ಸಂಜುಬಾಬಾ ಸಡನ್​ ಆಗಿ ಮಹಾಮಾರಿ ಕ್ಯಾನ್ಸರ್ ಶಾಕ್​ ಕೊಟ್ಟಿತ್ತು. ಇದರ ಚಿಕಿತ್ಸೆ ಪಡೆದುಕೊಳ್ತಿದ್ದು ಸಂಜಯ್​ ದತ್​​, ಅಭಿಮಾನಿಗಳಿಗೆ ಸ್ವೀಟ್​ ನ್ಯೂಸ್​ ಕೊಟ್ಟಿದ್ದಾರೆ.

ಸಂಜುಬಾಬಾ ಇದೇ ನಂವಬರ್​​ ತಿಂಗಳಿನಲ್ಲಿ ‘ಕೆಜಿಎಫ್​-2’ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರಂತೆ. ಇದರ ಜೊತೆಗೆ ಕ್ಲೈಮ್ಯಾಕ್ಸ್​​ನಲ್ಲಿ ಭಯಾನಕ ಫೈಟ್​​ ದೃಶ್ಯಗಳಿದ್ದು,‘ಅಗ್ನಿಪತ್​​’ ಸಿನಿಮಾದ ರೀತಿಯಲ್ಲಿ ಮುಂಬೈನಲ್ಲಿ ಚಿತ್ರೀಕರಿಸಲಿದ್ದಾರಂತೆ. ಇನ್ನು ಇದರಲ್ಲಿ ರಾಕಿಭಾಯ್​​ ಹಾಗೂ ಬಾಲಿವುಡ್​​ ಸಂಜುಬಾಬಾ, ಬೇರ್​​ ಬಾಡಿ ಜೊತೆಗೆ ಸಿಕ್ಸ್​​ ಪ್ಯಾಕ್​​ ಲುಕ್​​ನಲ್ಲಿ ಶರ್ಟ್‌ಲೆಸ್‌ ಆಗಿ ಭರ್ಜರಿ ಕಾದಾಟ ನಡೆಸಲಿದ್ದಾರಂತೆ.ಈಗಾಗಲೇ ಕರಾವಳಿಯಲ್ಲಿ ಶೂಟಿಂಗ್​ ನಡೆಯುತ್ತಿದ್ದು, ನಂತ್ರ ಚಿತ್ರತಂಡ ಹೈದ್ರಾಬಾದ್​ಗೆ ಹಾರಲಿದೆ. ಇದರ ನಂತ್ರ ಸಂಜುಬಾಬಾ ಜೊತೆ ರಾಕಿಭಾಯ್​ ಕಾಳಗ ಮುಂಬೈನಲ್ಲಿ ನಡೆಯಲಿದೆ. ಇನ್ನು ಕೆಲ ಮೂಲಗಳ ಪ್ರಕಾರ, 2021ರ ಜನವರಿ 14ರ ಸಂಕ್ರಾಂತಿ ಹಬ್ಬದಂದು ‘ಕೆಜಿಎಫ್‌ 2’ ಅದ್ದೂರಿಯಾಗಿ ರಿಲೀಸ್ ಆಗಲಿದೆ ಎನ್ನಲಾಗಿದೆ.

Comments are closed.