
ನವದೆಹಲಿ: ಕಾಲ ಕಳೆದಂತೆ ಆಧಾರ್ ಕಾರ್ಡ್ ಸಹ ಹೈಟೆಕ್ ಆಗಿ ಮಾರ್ಪಟ್ಟಿದೆ. ಯುಐಡಿಎಐ ಇದನ್ನು ಹೊಸ ಅವತಾರದಲ್ಲಿ ಪರಿಚಯಿಸಿದೆ. ಈಗ ಆಧಾರ್ ಕಾರ್ಡ್ ಎಟಿಎಂ ಕಾರ್ಡ್ಗಳಂತೆ ಕಾಣಿಸುತ್ತದೆ.
ಹೊಸ ರೂಪದಲ್ಲಿ ಆಧಾರ್ ಕಾರ್ಡ್:
ಈಗ ಪಿವಿಸಿ ಕಾರ್ಡ್ನಲ್ಲಿ ಆಧಾರ್ ಕಾರ್ಡ್ ಮರುಮುದ್ರಣ ಮಾಡಬಹುದು ಎಂದು ಯುಐಡಿಎಐ ಟ್ವೀಟ್ ಮಾಡಿದೆ. ನಿಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ನಂತೆಯೇ ಈ ಕಾರ್ಡ್ ಅನ್ನು ಕೂಡ ನಿಮ್ಮ ವ್ಯಾಲೆಟ್ನಲ್ಲಿ ಸುಲಭವಾಗಿ ಇಡಬಹುದು. ಯುಐಡಿಎಐ ಟ್ವೀಟ್ ಮಾಡಿ, ‘ನಿಮ್ಮ ಆಧಾರ್ ಈಗ ಅನುಕೂಲಕರ ಗಾತ್ರದಲ್ಲಿರುತ್ತದೆ, ಅದನ್ನು ನೀವು ಸುಲಭವಾಗಿ ನಿಮ್ಮ ಪರ್ಸ್ ನಲ್ಲಿ ಇಡಬಹುದು.’ ಆದಾಗ್ಯೂ ಈ ಕಾರ್ಡ್ ಮಾಡಲು ನೀವು 50 ರೂಪಾಯಿಗಳನ್ನು ಖರ್ಚು ಮಾತ್ರ ಮಾಡಬೇಕಾಗುತ್ತದೆ.
ಹೊಸ ಆಧಾರ್ ಕಾರ್ಡ್ನಲ್ಲಿ ಏನು ವಿಶೇಷತೆ?
ಪ್ರತಿ ಋತುವಿನಲ್ಲಿ ಆಧಾರ್ ಪಿವಿಸಿ ಕಾರ್ಡ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಅದು ಒದ್ದೆಯಾಗುವುದು, ಕಟ್ ಆಗುವುದು ಮತ್ತು ಫೋಲ್ಡ್ ಆಗಬಹುದು ಎಂಬ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಪಿವಿಸಿ ಕಾರ್ಡ್ಗಳ ರೂಪದಲ್ಲಿ ಹೊಸ ಆಧಾರ್ ಲುಕ್ ನಲ್ಲಿ ಆಕರ್ಷಕವಾಗಿದೆ ಮತ್ತು ಇತ್ತೀಚಿನ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಭದ್ರತಾ ವೈಶಿಷ್ಟ್ಯಗಳು ಹೊಲೊಗ್ರಾಮ್ಗಳು, ಗಿಲ್ಲೊಚೆ ಮಾದರಿಗಳು, ಗೋಸ್ಟ್ ಇಮೇಜ್ ಗಳನ್ನೂ ಮತ್ತು ಮೈಕ್ರೊಟೆಕ್ಸ್ಟ್ ಅನ್ನು ಒಳಗೊಂಡಿರುತ್ತವೆ. ಆಧಾರ್ ಪಿವಿಸಿ ಕಾರ್ಡ್ಗಳನ್ನು ಈಗ ಆನ್ಲೈನ್ನಲ್ಲಿ ಕೂಡ ಆದೇಶಿಸಬಹುದು.
ಹೊಸ ಆಧಾರ್ ಪಿವಿಸಿ ಕಾರ್ಡ್ ತಯಾರಿಸುವುದು ಹೇಗೆ ?
1. ಮೊದಲು ನೀವು ಯುಐಡಿಎಐ ವೆಬ್ಸೈಟ್ https://uidai.gov.in/ ಗೆ ಹೋಗಬೇಕು
2. ಇಲ್ಲಿ, ‘My Aadhaar’ ವಿಭಾಗಕ್ಕೆ ಹೋಗಿ ‘Order Aadhaar PVC Card’ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ
4. ಭದ್ರತಾ ಕೋಡ್, ಕ್ಯಾಪ್ಚಾ ತುಂಬಿದ ನಂತರ ಒಟಿಪಿ ಕ್ಲಿಕ್ ಮಾಡಿ
5. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಕಾಣಿಸುತ್ತದೆ, ಅದನ್ನು ನಮೂದಿಸಿ
6. ಆಧಾರ್ ಪಿವಿಸಿ ಕಾರ್ಡ್ ಪೂರ್ವವೀಕ್ಷಣೆ ನಿಮ್ಮ ಮುಂದೆ ಕಾಣಿಸುತ್ತದೆ.
7. ಇದರ ನಂತರ ನೀವು ಪಾವತಿಯ ಮೇಲೆ ಕ್ಲಿಕ್ ಮಾಡಿ, 50 ರೂ. ಪಾವತಿಸಿ
8. ಪಾವತಿ ಮಾಡಿದ ತಕ್ಷಣ ನಿಮ್ಮ ಪ್ರಕ್ರಿಯೆಯು ಪೂರ್ಣಗೊಂಡಿದೆ, ಅದು ನಿಮ್ಮ ಮನೆಗೆ ಸ್ಪೀಡ್ ಪೋಸ್ಟ್ನೊಂದಿಗೆ ಬರುತ್ತದೆ.
Comments are closed.