ಮನೋರಂಜನೆ

ಅತ್ಯಾಚಾರಿಗಳ ಮರ್ಮಾಂಗ ಕತ್ತರಿಸಿ – ರೋಜಾ ಖ್ಯಾತಿಯ ನಟಿ ಮಧುಬಾಲ

Pinterest LinkedIn Tumblr


ಬೆಂಗಳೂರು: ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ, ಮರ್ಮಾಂಗ ಕತ್ತರಿಸಿ ಎಂದು ನಟಿ ಮಧುಬಾಲ ಹೇಳಿದ್ದಾರೆ.

ಅಣ್ಣಯ್ಯ ಚಿತ್ರ ಖ್ಯಾತಿಯ ಮಧುಬಾಲಾ ಫೇಸ್ಬುಕ್ ನಲ್ಲಿ ಕೆಂಡಕಾರಿದ್ದಾರೆ‌. ಕೊರೋನಾದಿಂದ ಒಂದೆಡೆ ಇಡೀ ಜಗತ್ತು ಮನುಕುಲ ತೊಂದರೆಗೊಳಗಾಗಿದೆ. ನಾವು ಒಬ್ಬರನ್ನೊಬ್ಬರು ಈ ಸಮಯದಲ್ಲಿ ನೋಡಿಕೊಳ್ಳಬೇಕು, ಕಾಪಾಡಿಕೊಳ್ಳಬೇಕು.

ಅಂಥಾದ್ದರಲ್ಲಿ ಜಗತ್ತಿನ ಎರಡು‌ ಕಣ್ಣುಗಳಂತಿರೊ ಗಂಡು ಹೆಣ್ಣಿನ ಮಧ್ಯೆ ಈ ತಾರತಮ್ಯ ಏಕೆ ? ಹೆಣ್ಣೆಂದರೆ ಬೇರೆ ಅಲ್ಲ, ಅವಳೂ ನಿಮ್ಮ ಹಾಗೆಯೇ ಮನುಷ್ಯಳು ಅನ್ನೋದನ್ನ ಮರೆಯಬೇಡಿ. ರೇಪ್ ಮಾಡುವವರನ್ನ ಗಲ್ಲಿಗೇರಿಸಿ, ಮರ್ಮಾಂಗ ಕತ್ತರಿಸಿ ಅಂತ ಗಟ್ಟಿ ಧ್ವನಿಯಲ್ಲಿ ಮಧು ಆಗ್ರಹ‌ ಮಾಡಿದ್ದಾರೆ. ಯಾವಿದೇ ಮೇಕಪ್ ಇಲ್ಲದೇ ಮಾಡಿದ ಇ ವಿಡಿಯೋ ಫೇಸ್ಬುಕ್ ನಲ್ಲಿ ಸಖತ್ ವೈರಲ್ ಆಗ್ತಾ ಇದೆ.

Comments are closed.