ಕರ್ನಾಟಕ

ಸೂರತ್ ಮತ್ತು ಬೆಂಗಳೂರಿನಲ್ಲಿ ಚಿನ್ನದ ಮಳೆ. ಮುಗಿಬಿದ್ದ ಜನತೆ

Pinterest LinkedIn Tumblr


ಬೆಂಗಳೂರು: ಸೂರತ್​​ ಏರ್​ಪೋರ್ಟ್​ ಹತ್ತಿರದ ದುಮಾಸ್​ ಹಳ್ಳಿಯಲ್ಲಿ ನಾಣ್ಯ ರೂಪದ ಚಿನ್ನದ ಬಿಸ್ಕಟ್ ಮಾದರಿ ಬಿಲ್ಲೆಗಳು ಪತ್ತೆಯಾಗಿವೆ. ಇವುಗಳನ್ನು ಹಾರಿಸಿಕೊಳ್ಳಲು ಜನತೆ ಕಾರ್​​​, ಬೈಕ್​ಗಳಲ್ಲಿ ಅಲೆದಾಡಿದ್ದಾರೆ.

ಪತ್ತೆಯಾದ ಚಿನ್ನದ ನಾಣ್ಯ ಮಾದರಿ ಬಿಲ್ಲೆಗಳ ಮೇಲೆ ಕೆಲವು ಸಿಂಬಲ್​ಗಳಿವೆ. ಹೀಗಾಗಿ ಇವುಗಳನ್ನು ಸಂಗ್ರಹ ಮಾಡಿರೋ ಅಧಿಕಾರಿಗಳು ಪರೀಕ್ಷೆಗೂ ರವಾನೆ ಮಾಡಿದ್ದಾರೆ.  ಯಾರಾದ್ರೂ ಮಾರಾಟಕ್ಕೆ ತಗೆದುಕೊಂಡು ಹೋಗುವಾಗ ಚೆಲ್ಲಿರಬಹುದೇ, ಅಕ್ರಮವಾಗಿ ಸಾಗಿಸುತ್ತಿರುವಾಗ ಸಿಕ್ಕಿ ಬೀಳೋ ಭಯದಲ್ಲಿ ಯಾರಾದ್ರೂ ಎಸೆದು ಹೋಗಿರಬಹುದೇ ಎನ್ನುವ ಕುತೂಹಲ ಮನೆ ಮಾಡಿದೆ.

ಇನ್ನು ಇತ್ತ ಬೆಂಗಳೂರಿನ ಬೆಂಗಳೂರಿನಲ್ಲೂ ಸುರೀತಾ ಇದೆಯಂತೆ ಚಿನ್ನದ ಮಳೆ. ಮಳೆಯ ಜತೆ ಚಿನ್ನವೂ ಸುರಿದಿದೆ ಎನ್ನುತ್ತಿದ್ದಾರೆ ಅನೇಕಲ್ ಜನ. ಚಿನ್ನಕ್ಕಾಗಿ ಮುಗಿಬಿದ್ದು ಬಂಗಾರ ಹೆಕ್ಕುವಲ್ಲಿ ಇಲ್ಲಿನ ಜನ ತಲ್ಲೀನರಾಗಿದ್ದಾರೆ. ಬೆಂಗಳೂರಿನ ಹೊರವಲಯದ ಸರ್ಜಾಪುರ, ಬಾಗಲೂರು ಸಮೀಪದಲ್ಲಿ ಚಿನ್ನದ ಮಳೆ ವದಂತಿ ಹರಡಿದ್ದು ಅಲ್ಲಿನ ಜನ ಸದ್ಯ ಚಿನ್ನದ ಹುಡುಕಾಟದಲ್ಲಿ ತೊಡಗಿದ್ದಾರೆ. ಗಿಡ ಗಂಟೆಗಳನ್ನು ಲೆಕ್ಕಿಸದೆ ನೂರಾರು ಜನರು ಬಂಗಾರಕ್ಕಾಗಿ ಮುಗಿಬಿದ್ದಿದ್ದಾರೆ.

Comments are closed.