
ಮಂಗಳೂರು: ಡಿಕೆ ಶಿವಕುಮಾರ್ ಮನೆಯ ಮೇಲೆ ಸಿಬಿಐ ದಾಳಿಯ ಕುರಿತು ಕಾಂಗ್ರೇಸ್ ಜನರ ಹಾದಿ ತಪ್ಪಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಕಾಂಗ್ರೇಸ್ ಮುಖಂಡರು ತಮ್ಮ ನಾಯಕ ತಪ್ಪು ಮಾಡದೆ ಹೋಗಿದ್ದರೆ ಸಿಬಿಐ ಯಾಕೆ ದಾಳಿ ಮಾಡುತ್ತಿತ್ತು ಎನ್ನುವುದನ್ನು ಅರ್ಥೈಸಿಕೊಳ್ಳಲಿ. ಯಾರೇ ತಪ್ಪು ಮಾಡಿದರೂ ತನಿಖಾ ತಂಡಗಳಿಗೆ ಆ ವ್ಯಕ್ತಿಯನ್ನು ಬಂಧಿಸಲು ಅಥವ ವಿಚಾರಣೆ ನಡೆಸಲು ಅಧಿಕಾರವಿದೆ. ಯಾವುದೇ ಪಕ್ಷವು ಆಡಳಿತದಲ್ಲಿದ್ದರೂ ತನಿಖಾ ತಂಡ ತಪ್ಪಿತಸ್ಥರನ್ನು ವಿಚಾರಣೆ ನಡೆಸುತ್ತದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಕಾಂಗ್ರೇಸ್ ಅಥವಾ ಇನ್ಯಾವುದೇ ಪಕ್ಷದ ಮುಖಂಡರ ಮೇಲೆ ಸಿಬಿಐ ದಾಳಿ ಮಾಡಿಲ್ಲ. ಕೇವಲ ಡಿಕೆಶಿ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸಿದೆ ಯಾಕೆ?.. ಅಂದರೆ ಸೂಕ್ತ ಮಾಹಿತಿಯ ಆಧಾರದ ಮೇಲೆಯೇ ವಿಚಾರಣೆ ನಡೆಯುತ್ತದೆ. ಆದರೆ ಕಾಂಗ್ರೇಸ್ ಪಕ್ಷದ ಪ್ರಮುಖರು ರಾಜಕೀಯ ಲಾಭಕ್ಕಾಗಿ ಬಿಜೆಪಿಯನ್ನು ಮಧ್ಯೆ ಎಳೆದು ತರುತಿದ್ದಾರೆ ಎಂದರು.
ಕಾಂಗ್ರೇಸ್ ಮುಖಂಡರು ತಪ್ಪು ಮಾಡದಿದ್ದರೆ ತನಿಖೆಗೆ ಹೆದರುವ ಅವಶ್ಯಕತೆ ಏನಿದೆ. ಜನರ ಮನಸ್ಸಿನಲ್ಲಿ ಗೊಂದಲ ಎಬ್ಬಿಸುವ ಕಾಂಗ್ರೇಸ್ ಷಡ್ಯಂತ್ರವನ್ನು ಬುದ್ಧಿವಂತ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
Comments are closed.