ಮನೋರಂಜನೆ

ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ; ಬಂಧಿಸಲ್ಪಟ್ಟಿದ್ದ ನಟಿ ರಿಯಾ ಚಕ್ರವರ್ತಿಗೆ ಜಾಮೀನು

Pinterest LinkedIn Tumblr

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿದ್ದ ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.

ಸೆಪ್ಟೆಂಬರ್ 8ರಂದು ವಿಚಾರಣೆಗೆ ಹಾಜರಾಗಿದ್ದ ನಟಿ ರಿಯಾ ಚಕ್ರವರ್ತಿಯನ್ನು ಎನ್‍ಸಿಬಿ ಬಂಧಿಸಿತ್ತು. ಮಂಗಳವಾರ ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಪ್ರಕರಣದ ಅರ್ಜಿ ಮುಂಬೈನ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯದ ಮುಂದೆ ಬಂದಿತ್ತು. ವಿಚಾರಣೆ ನಡೆಸಿದ್ದ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ರಿಯಾ ಸೇರಿದಂತೆ ಪ್ರಕರಣದಲ್ಲಿ ಬಂಧಿತ 20 ಆರೋಪಿಗಳ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಿ ಆದೇಶ ನೀಡಿತ್ತು. ಇತ್ತ ರಿಯಾ ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ರಿಯಾ ಅವರಿಗೆ ಬಾಂಬೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಇತ್ತ ಬಂಧನದಲ್ಲಿರುವ ರಿಯಾ ಸೋದರ ಶೌವಿಕ್ ಚಕ್ರವರ್ತಿ ಜಾಮೀನು ಅರ್ಜಿ ವಜಾಗೊಂಡಿದೆ. ಮುಂಬೈನ ಬೈಖಲ್ಲಾ ಜೈಲಿನಲ್ಲಿರೋ ರಿಯಾ ಇಂದು ಹೊರ ಬರಲಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಎನ್‍ಸಿಬಿ ಇದುವವರೆಗೂ 20 ಆರೋಪಿಗಳನ್ನ ಬಂಧಿಸಿದೆ. ರಿಯಾ ಮತ್ತು ಶೌವಿಕ್ ಇಬ್ಬರು ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕದಲ್ಲಿರೋ ವಿಷಯ ಸಿಬಿಐ ತನಿಖೆ ವೇಳೆ ತಿಳಿದು ಬಂದಿತ್ತು. ಸಿಬಿಐ ಶಿಫಾರಸ್ಸಿನ ಮೇರೆಗೆ ಎನ್‍ಸಿಬಿ ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿತ್ತು. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ರಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಎನ್‍ಸಿಬಿಯ ವಿಚಾರಣೆ ಎದುರಿಸಿದ್ದಾರೆ.

Comments are closed.