ಅಂತರಾಷ್ಟ್ರೀಯ

ಪ್ರವಾಸದ ವೇಳೆ ದೇಹ ಸುಖ ಪಡೆಯಲು ಬಂದಿದ್ದ ಗಿರಾಕಿ 85ರ ಅಜ್ಜಿಯನ್ನೇ ವಿವಾಹವಾದ 32 ವರ್ಷದ ವ್ಯಕ್ತಿ

Pinterest LinkedIn Tumblr


ದಕ್ಷಿಣ ಆಫ್ರಿಕಾದ 32 ವರ್ಷದ ವ್ಯಕ್ತಿಯೋರ್ವ 85 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾನೆ. ಈ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.

ಆತನ ಹೆಸರು ಅಲ್ಕಾ. ದಕ್ಷಿಣ ಆಫ್ರಿಕಾದ ಗ್ಯಾಂಬಿಯನ್ ಅನ್ನೋ ದೇಶದವನು. ಈ ದೇಶಕ್ಕೆ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಕಾ ಕಳೆದ 15 ವರ್ಷಗಳಿಂದ ರೆಸಾರ್ಟ್ ನಡೆಸಿಕೊಂಡಿದ್ದ.

ಅಷ್ಟೇ ಅಲ್ಲ, ಕೆಲ ವಯಸ್ಸಾದ ಮಹಿಳೆಯರು ದೇಹ ಸುಖ ಪಡೆಯಲು ಇಲ್ಲಿಗೆ ಆಗಮಿಸುತ್ತಿದ್ದರಂತೆ. ಅಂಥವರ ಜೊತೆ ಈತ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ಅದಕ್ಕೆ ಹಣವನ್ನೂ ಪಡೆಯುತ್ತಿದ್ದ.

ಆದರೆ, ಇತ್ತೀಚೆಗೆ ಆತನಿಗೆ ಎಲ್ಲವೂ ಸಾಕು ಎನಿಸಿ ಬಿಟ್ಟಿದೆಯಂತೆ. ಹೀಗಾಗಿ ಪ್ರೀತಿಯನ್ನು ಅರಸಿ ಹೊರಟಿದ್ದ. ಈ ವೇಳೆ ಆತನಿಗೆ ಸಿಕ್ಕಿದ್ದು ಹಣ್ಣಣ್ಣು ಮುದುಕಿ ಓಯಿಸ್. ಆಕೆ ತನ್ನ ವಯಸ್ಸು 85 ವರ್ಷ ಎಂದು ಹೇಳಿಕೊಂಡಿದ್ದಳು. ಇಬ್ಬರೂ ಒಟ್ಟಿಗೆ ಇದ್ದ ಕೆಲವೇ ದಿನಗಳಲ್ಲಿ ಆಪ್ತರಾಗಿ ಬಿಟ್ಟಿದ್ದರು. ಅಷ್ಟೇ ಅಲ್ಲ, ಆಕೆ ಈತನಿಗೆ ಸುಮಾರು ಲಕ್ಷ ರೂಪಾಯಿ ಹಣವನ್ನೂ ನೀಡಿದ್ದಳು.

ಇದಾದ ನಂತರ ಆಕೆ ಮರಳಿ ತನ್ನ ದೇಶಕ್ಕೆ ತೆರಳಿದ್ದಳು. ಆಕೆ ಕೊಟ್ಟ ಹಣದಲ್ಲಿ ಒಂದು ಜಾಗ ಖರೀದಿಸಿ ಅಲ್ಲಿ ಮನೆ ನಿರ್ಮಾಣ ಮಾಡಿದ್ದ. ಆದರೆ, ಆಕೆಯನ್ನು ಬಿಟ್ಟು ಇರಲು ಈತನಿಗೆ ಸಾಧ್ಯವಾಗುತ್ತಲೇ ಇರಲಿಲ್ಲ. ಹೀಗಾಗಿ, ಆಕೆಯನ್ನು ಮತ್ತೆ ಸಂಪರ್ಕಿಸಿದ್ದ. ಅಲ್ಲದೆ, ಮದುವೆ ಆಗುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದ.

ಈ ಮದುವೆಗೆ ಆತನ ಕುಟುಂಬದ ಯಾರೊಬ್ಬರೂ ಬಂದಿರಲಿಲ್ಲ. ಮತ್ತೊಂದು ಅಚ್ಚರಿಯ ವಿಚಾರ ಎಂದರೆ, ಈಕೆಯ ವಯಸ್ಸು 85 ಅಲ್ಲ, 58 ಎಂದು ಮದುವೆ ನಂತರದಲ್ಲಿ ತಿಳಿದು ಬಂದಿದೆ. ಈ ವಿಚಾರ ತಿಳಿದು ಅಲ್ಕಾ ಮತ್ತಷ್ಟು ಸಂತೋಷಗೊಂಡಿದ್ದಾನೆ.

Comments are closed.