ಮನೋರಂಜನೆ

ಹತ್ರಾಸ್ ಅ”ತ್ಯಾಚಾರ ಪ್ರಕರಣ: ಹೈದರಾಬಾದ್ ಎನ್ಕೌಂ”ಟರ್ ರೀತಿ ಕ್ರಮಕ್ಕೆ ಆಶಾಭಾವ ವ್ಯಕ್ತಪಡಿಸಿದ ನಟಿ ಕಂಗನಾ!

Pinterest LinkedIn Tumblr


ಮುಂಬೈ: ನಿರ್ಭಯ ಅ”ತ್ಯಾಚಾರ ಪ್ರಕರಣದ ರೀತಿಯಲ್ಲೇ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ಅ”ತ್ಯಾಚಾರ ಪ್ರಕರಣ ನಡೆದಿದ್ದು, ಈ ವಿಷಯಕ್ಕೆ ಸಂಬಂಧಿಸಿ ಸರಿಯಾದ ಕ್ರಮವನ್ನು ಸಿಎಂ ಯೋಗಿ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಹೈದರಾಬಾದ್ ನಲ್ಲಿ ನಡೆದಿದ್ದ ಅ”ತ್ಯಾಚಾರ-ಕೊ”ಲೆ ಪ್ರಕರಣದಲ್ಲಿ ಆರೋಪಿಗಳ ಎನ್ ಕೌಂ”ಟರ್ ನಡೆದಿದ್ದು ಅದೇ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಆಶಾಭಾವವನ್ನು ನಟಿ ವ್ಯಕ್ತಪಡಿಸಿದ್ದು ‘ಭಾವನಾತ್ಮಕ, ಸಹಜ ಮತ್ತು ಹಠಾತ್ ನ್ಯಾಯಕ್ಕಾಗಿ ಕರೆ ನೀಡಿದರು.

ಟ್ವೀಟ್ ಮಾಡಿರುವ ಕಂಗನಾ ವಿವಾದಾತ್ಮಕ ಹೈದರಾಬಾದ್ ಪ್ರಕರಣದಂತೆ ಅದೇ ರೀತಿಯ ಕ್ರಮಕ್ಕೆ ಸಂಬಂಧಿಸಿದಂತೆ ಕಂಗನಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆ ‘ಅಪಾರ ನಂಬಿಕೆಯನ್ನು’ ವ್ಯಕ್ತಪಡಿಸಿದ್ದಾರೆ.

ಸೆ. 14ರಂದು ಯುವತಿಯು ತಮ್ಮ ಜಮೀನಿನಲ್ಲಿ ತಾಯಿಯೊಂದಿಗೆ ಮೇವು ತರಲು ಹೋಗಿದ್ದಾಗ ನಾಲ್ವರು ಕಾ”ಮುಕರು ಎಳೆದೊಯ್ದು ಅ”ತ್ಯಾಚಾರವೆಸಗಿದ್ದಾರೆ. ಅಲ್ಲದೆ, ಆಕೆಯ ನಾಲಿಗೆಯನ್ನು ಕತ್ತರಿಸಿದ್ದಾರೆ. ಆಕೆಯ ಬೆನ್ನುಮೂಳೆ ಮತ್ತು ಕುತ್ತಿಗೆಗೆ ಹಾ”ನಿ ಮಾಡಿದ್ದಾರೆ. ಗಂ”ಭೀರ ಗಾಯಗಳಿಂದ ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದರು.

Comments are closed.