ರಾಷ್ಟ್ರೀಯ

ಮೇಘಾಲಯದಲ್ಲಿ ಭೂಕುಸಿತ: ಮೃತಪಟ್ಟ ಮಹಿಳಾ ಕ್ರಿಕೆಟ್ ಆಟಗಾರ್ತಿ

Pinterest LinkedIn Tumblr


ಶಿಲ್ಲಾಂಗ್: ಮೇಘಾಲಯದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.

ಮೇಘಾಲಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಈಸ್ಟ್ ಕಾಶಿ ಹಿಲ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಸಾವನ್ನಪ್ಪಿದ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ರಜಿಯಾ ಅಹ್ಮದ್ (30 ವರ್ಷ) ಎಂದು ಗುರುತಿಸಲಾಗಿದೆ.

ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಹಿಳೆಯ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ರಜಿಯಾ ಸಾವಿಗೆ ಮೇಘಾಲಯ ಕ್ರಿಕೆಟ್ ತಂಡದ ಸಹ ಆಟಗಾರರು ಸಂತಾಪ ಸೂಚಿಸಿದ್ದಾರೆ. ರಜಿಯಾ ಸಾವು ಆಘಾತ ತಂದಿದೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಹ ಆಟಗಾರ್ತಿ ಕಕೋಲಿ ಚಕ್ರವರ್ತಿ ಹೇಳಿದ್ದಾರೆ.

Comments are closed.