
ಶ್ರೀನಗರ: ದಯವಿಟ್ಟು ನೀವು ಮನೆಗೆ ಬನ್ನಿ. ಇಲ್ಲದಿದ್ದರೆ ನಾನು ಮತ್ತು ಪುತ್ರ ಇಬ್ಬರೂ ಸಾ#ಯುತ್ತೇವೆ. ನಮ್ಮ ಶ#ವವನ್ನು ನೀವು ನೋಡಬೇಕಾಗುತ್ತದೆ. ದಯೆಮಾಡಿ ನನ್ನ ಪತಿಯನ್ನು ಹಿಂದಿರುಗಿಸಿ ಮನೆಗೆ ಕಳುಹಿಸಿಬಿಡಿ ಎಂದು ಭ@ಯೋತ್ಪಾದಕ ತಾರಿಕ್ ಅಹ್ಮದ್ ಭಟ್ ಎಂಬ ಭ@ಯೋತ್ಪಾದಕನ ಮಡದಿ ಗರ್ಭಿಣಿಯೊಬ್ಬಳು ವಿಡಿಯೋ ಸಂದೇಶದಲ್ಲಿ ಮನವಿ ಮಾಡಿದ್ದಾಳೆ.
ಮಧ್ಯ ಕಾಶ್ಮೀರದ ಬಡಗಾಮ್ ಮೂಲದ ತಾರಿಕ್, ವೃತ್ತಿಯಲ್ಲಿ ಆಟೋಚಾಲಕನಾಗಿದ್ದ ಈತ ಏಕಾಏಕಿ ಕಾಣೆಯಾಗಿಬಿಟ್ಟಿದ್ದ. ತನ್ನ ಗರ್ಭಿಣಿ ಪತ್ನಿ ಮತ್ತು ನಾಲ್ಕು ವರ್ಷದ ಮಗನನನ್ನು ಬಿಟ್ಟು ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ.
ಸೆಪ್ಟೆಂಬರ್ 20 ರಂದು ಚಡೂರಾ ಎಂಬ ಪೊಲೀಸ್ ಠಾಣೆಯಲ್ಲಿ ಈತನ ತಾಯಿ ತಮ್ಮ ಮಗ ಕಾಣೆಯಾಗಿರುವ ಬಗ್ಗೆ ದೂರನ್ನು ದಾಖಲಿಸಿದ್ದರು. ನಂತರ ಕಳೆದ ಭಾನುವಾರ ಭ#ಯೋತ್ಪಾದಕರ ತಂಡವು ಆಡಿಯೋ ಒಂದನ್ನು ರಿಲೀಸ್ ಮಾಡಿ, ಅದರಲ್ಲಿ ತಾರಿಕ್ ತಮ್ಮ ಸಂಘಟನೆಯನ್ನು ಸೇರಿಕೊಂಡಿರುವ ಬಗ್ಗೆ ಹೇಳಿದಾಗ ಈ ಕುಟುಂಬಕ್ಕೆ ಆಘಾತವಾಗಿ ಹೋಗಿತ್ತು.
“ನನಗಾಗಿ, ನಿಮ್ಮ 4 ವರ್ಷದ ಮಗ ಮತ್ತು ವಯಸ್ಸಾದ ಪಾಲಕರ ಮುಖ ನೋಡಿ ಮನೆಗೆ ಬನ್ನಿ. ಇಲ್ಲದಿದ್ದರೆ ನಾನು ಮತ್ತು ಮಗ ಹೆ#ಣವಾಗುತ್ತೇವೆ. ಮತ್ತೆ ಮತ್ತೆ ನಿಮ್ಮಲ್ಲಿ ಭಿನ್ನವಿಸಿಕೊಳ್ಳುತ್ತಿದ್ದೇವೆ’ ಎಂದು ಪತ್ನಿ ವಿಡಿಯೋದಲ್ಲಿ ಹೇಳಿದ್ದು, ಅದು ವೈರಲ್ ಆಗಿದೆ.
‘ನಿಮ್ಮ ಮಗನ ಮುಖವನ್ನಾದರೂ ನೋಡಿ ಬನ್ನಿ. ನನ್ನ ಗರ್ಭದಲ್ಲಿಯೂ ಒಂದು ಮಗು ಇದೆ. ನೀವು ಇಲ್ಲದಿದ್ದರೆ ಅದನ್ನು ನೋಡಿಕೊಳ್ಳುವವರು ಯಾರು. ನೀವು ಹಿಂತಿರುಗದಿದ್ದರೆ, ನಾವು ಸಾ#ಯುತ್ತೇವೆ’ ಎಂದು ಕಣ್ಣೀರು ಸುರಿಸಿದ್ದಾಳೆ ಪತ್ನಿ.
Comments are closed.