
ರಾಂಚಿ: ಜಾರ್ಖಂಡ್ ಸರ್ಕಾರವು 10 ಮತ್ತು 12ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಆಲ್ಟೊ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.
ಶಿಕ್ಷಣ ಸಚಿವ ಜಗರ್ನಾಥ್ ಮಹ್ಟೋ ವಿದ್ಯಾರ್ಥಿಗಳಿಗೆ ಮಾರುತಿ ಆಲ್ಟೊ ಕಾರುಗಳನ್ನು ಹಸ್ತಾಂತರಿಸಿದರು.
ಈ ಹಿಂದೆಯೇ ಸಚಿವರು 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದರು.
ಮುಂದಿನ ವರ್ಷದಿಂದ 11ನೇ ತರಗತಿಯ ಟಾಪರ್ ಗಳಿಗೂ ಕಾರು ಗಿಫ್ಟ್ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
Comments are closed.