
ನವದೆಹಲಿ: ಜಾಗತಿಕವಾಗಿ ಕೊರೋನಾ ಹೆಚ್ಚಳ ಹಿನ್ನಲೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಸೌದಿ ಅರೇಬಿಯಾ ನಿಷೇಧ ಹೇರಿದೆ.
ಸೌದಿ ಅರೇಬಿಯಾದ ಜನರಲ್ ಅಥಾರಿಟಿ ಆಫ್ ಸಿವಿಲ್ ಏವಿಯೇಷನ್ (ಜಿಎಸಿಎ) ಈ ಸಂಬಂಧ ಅಧಿಕೃತ ಪ್ರಕಟಣೆಯನ್ನೂ ಹೊರಡಿಸಿ “ಭಾರತ, ಬ್ರಿಜಿಲ್ ಮತ್ತು ಅರ್ಜೆಂಟೀನಾಗಳ ವಿಮಾನಗಳು ನಮ್ಮ ದೇಶದಲ್ಲಿ ಇಳಿಯಲು ನಿಷೇಧ ವಿಧಿಸಲಾಗಿದೆ. ಇಲ್ಲಿಂದ ನಮ್ಮ ದೇಶಕ್ಕೆ ಬರುವ ಯಾವುದೇ ವ್ಯಕ್ತಿ 14 ದಿನಗಳ ಮೊದಲೇ ಸೌದಿ ಆರೇಬಿಯಾ ವಿಮಾನಯಾನ ಸಚಿವಾಲಯಕ್ಕೆ ಮಾಹಿತಿ ನೀಡಬೇಕು” ಎಂದು ಹೇಳಿದೆ.
ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ಚಾರ್ಟರ್ಡ್ ಫ್ಲೈಟ್ ಕಂಪನಿಗಳು ಈ ನಿಮಯವನ್ನು ಚಾಚೂ ತಪ್ಪದೆ ಪಾಲಿಸಬೇಕು. ಜಿಎಸಿಎ ಸುತ್ತೋಲೆಯಲ್ಲಿ, “ಕೊರೋನಾ ವೈರಸ್ ಅಧಿಕವಾಗಿ ಹರಡಿರುವ ದೇಶಗಳಿಂದ ಮಾತ್ರ ಸೌದಿ ಅರೇಬಿಯಾಗೆ ವಿಮಾನ ಪ್ರಯಾಣವನ್ನು ಮುಂಜಾಗ್ರತಾ ಕ್ರಮವಾಗಿ ನಿಷೇಧಿಸಲಾಗಿದೆ ಎಂದು ಸೂಚನೆ ನೀಡಲಾಗಿದೆ.
ಈ ಹಿಂದೆ ಏರ್ ಇಂಡಿಯಾ ವಿಮಾನ ಆಗಸ್ಟ್ 28 ಮತ್ತು ಸೆಪ್ಟೆಂಬರ್ 4 ರಂದು COVID- ಪಾಸಿಟಿವ್ ಪ್ರಮಾಣಪತ್ರಗಳನ್ನು ಹೊಂದಿದ್ದ ಇಬ್ಬರು ಪ್ರಯಾಣಿಕರನ್ನು ಭಾರತದಿಂದ ಸೌದಿ ಅರೇಬಿಯಾಗೆ ಕರೆತಂದಿತ್ತು. ಸೌದಿ ಅರೇಬಿಯಾ ಮತ್ತು ಯುಎಇ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾರತೀಯ ವಲಸಿಗರು ನೆಲೆಸಿದ್ದಾರೆ. ಹೀಗಾಗಿ ದುಬೈ ಸಿವಿಲ್ ಏವಿಯೇಷನ್ ಅಥಾರಿಟಿ (ಡಿಸಿಎಎ) ತನ್ನ ಎಲ್ಲಾ ವಿಮಾನಗಳನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಿತ್ತು. .
COVID-19 Nagetive ಪ್ರಮಾಣ ಪತ್ರ ಹೊಂದಿದ್ದಾಗ್ಯೂ ಹಾಂಕಾಂಗ್ಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಬೆಳಸಿದ್ದ ಇಬ್ಬರಿಗೆ ಅಲ್ಲಿ ಪರೀಕ್ಷೆ ಮಾಡಲಾಗಿ ಕೋವಿಡ್ ಧನಾತ್ಮಕವಾಗಿತ್ತು. ಹೀಗಾಗಿ ಹಾಂಕಾಂಗ್ ಸರ್ಕಾರ ಸಹ ಭಾನುವಾರದಿಂದ ಅಕ್ಟೋಬರ್ 3 ರವರೆಗೆ ಏರ್ ಇಂಡಿಯಾ ವಿಮಾನಗಳನ್ನು ನಿಷೇಧಿಸಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದರು.
ಯುಎಇ ಸರ್ಕಾರದ ನಿಯಮಗಳ ಪ್ರಕಾರ, ಭಾರತದಿಂದ ಸೌದಿ ಅರೇಬಿಯಾಗೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕನು ಪ್ರಯಾಣಕ್ಕೆ 96 ಗಂಟೆಗಳ ಮೊದಲು ಮಾಡಿದ ಆರ್ಟಿ-ಪಿಸಿಆರ್ ಪರೀಕ್ಷೆಯ COVID 19- negative ಪ್ರಮಾಣಪತ್ರವನ್ನು ತರಬೇಕಾಗುತ್ತದೆ.
Comments are closed.