ಕರಾವಳಿ

ಸುರತ್ಕಲ್ ಕಳ್ಳತನ ಪ್ರಕರಣ : ರೂ.30,85,710/ ನಗದು, 224 ಗ್ರಾಂ ಚಿನ್ನಾಭರಣ ಸಹಿತಾ ನಾಲ್ವರ ಸೆರೆ

Pinterest LinkedIn Tumblr

ಮಂಗಳೂರು : ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯ ಇಡ್ಯಾ ಗ್ರಾಮದ ಅಪಾರ್ಟ್ ಮೆಂಟ್ ನಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ ಮಾಡಿದ ಇಬ್ಬರು ಹಾಗೂ ಅವರಿಗೆ ಸಹಕರಿಸಿದ ಇಬ್ಬರು ಸೇರಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸುರತ್ಕಲ್ ಪೋಲಿಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಕೃತ್ಯದಲ್ಲಿ ಭಾಗಿಯಾದ ಕೇರಳ ತಿರುವನಂತಪುರಮ್ ಮೂಲದ ಆರೋಪಿಗಳಾದ  ರಘು ಮತ್ತು ಅಮೇಶ್ ಹಾಗೂ ಇವರಿಗೆ ಸಹಕರಿಸಿದ ನವೀನ್  ಮತ್ತು ಬೆಳ್ತಂಗಡಿಯ ಸಂತೋಷ್ ಎಂದು ಗುರುತಿಸಲಾಗಿದೆ.

ಸುರತ್ಕಲ್ ಸಮೀಪದ ಇಡ್ಯಾ ಗ್ರಾಮದ ಜಾರ್ಡಿನ್ ಅಪಾರ್ಟ್ ಮೆಂಟ್ನಲ್ಲಿ ವಾಸ ಮಾಡಿಕೊಂಡಿರುವ  ಶ್ರೀಮತಿ ವಿದ್ಯಾ ಪ್ರಭು  ಇವರ ಫ್ಲಾಟಿಗೆ  ದಿನಾಂಕ 17-08-2020 ರಂದು ರಾತ್ರಿ ಹೊತ್ತು ಬಾಲ್ಕನಿ ಮೂಲಕ ನುಗ್ಗಿ  ಆರೋಪಿಗಳು ಕಳ್ಳತನ ಮಾಡಿದ್ದರು.

ಅದೇ ಫ್ಲಾಟಿನಲ್ಲಿ ವಾಸ ಮಾಡಿಕೊಂಡು ಸಂಚು ರೂಪಿಸಿದ ಜಾರ್ಡಿನ್ ಅಪಾರ್ಟ್ ಮೆಂಟ್ನ ಸೆಕ್ರಟರಿ ಹುದ್ದೆಯಲ್ಲಿದ್ದ ವೈನ್ ಶಾಪ್ ಒಂದರಲ್ಲಿ  ಮೆನಜರ್ ಕೆಲಸ ಮಾಡಿಕೊಂಡಿರುವ ಸೇನೆಯಿಂದ ನಿವೃತ್ತಗೊಂಡಿರುವ  ನವೀನ್  ಮತ್ತು ಅದೇ ವೈನ್ ಶಾಪಿನಲ್ಲಿ ವೈಟರ್ ಕೆಲಸ ಮಾಡುತ್ತಿದ್ದ  ಬೆಳ್ತಂಗಡಿಯ ಸಂತೋಷ್ ಎಂಬ ಇಬ್ಬರು ಕಳ್ಳತನಕ್ಕೆ ಸಹಕರಿಸಿದ್ದರು.

ದೂರು ದಾಖಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದ ಸುರತ್ಕಲ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 15-09-2020 ರಂದು ಕೃತ್ಯದಲ್ಲಿ ಭಾಗಿಯಾದ ಕೇರಳ ತಿರುವನಂತಪುರಮ್ ಮೂಲದ ಆರೋಪಿಗಳಾದ  ರಘು ಮತ್ತು ಅಮೇಶ್ ಎಂಬ ಇಬ್ಬರನ್ನು ಬಂಧಿಸಿರುತ್ತಾರೆ. ಆರೋಪಿಗಳಿಗೆ ಸಹಕರಿಸಿದ ರಘು ಮತ್ತು ಅಮೇಶ್ ಎಂಬ ಇಬ್ಬರನ್ನು  ದಿನಾಂಕ  18-09-2020 ರಂದು ಸುರತ್ಕಲ್ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಗಳು ಕಳ್ಳತನ ಮಾಡಿದ ಹಣದಲ್ಲಿ ದುಂದುವೆಚ್ಚ  ಮಾಡಿರುತ್ತಾರೆ.  ಅವರ ವಶದಲ್ಲಿದ್ದ  ರೂಪಾಯಿ 30,85,710/- ನಗದು ಹಣ ಮತ್ತು 224 ಗ್ರಾಂ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕಾರು ಮತ್ತು  ದ್ವಿಚಕ್ರ ವಾಹನವನ್ನು ಬಂಧಿತ ಆರೋಪಿಗಳಿಂದ ಸ್ವಾಧೀನಪಡಿಸಲಾಗಿದೆ. ಈ ಪ್ರಕರಣದಲ್ಲಿ ಕೇರಳ ಮೂಲದ ಗುರುತ್ತಿಸಲ್ಪಟ್ಟ ಇನ್ನೂ ಇಬ್ಬರು ಆರೋಪಿಗಳಿದ್ದು ಅವರ ದಸ್ತಗಿರಿಗೆ ಬಾಕಿ ಇರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.