
ಬೆಂಗಳೂರು: ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪಕ್ಷ ಯಾಕೆ ಹಿಂದೇಟು ಹಾಕುತ್ತಿದೆ. ಖಾಸಗಿ ವಾಹಿನಿಯೊಂದು ಯಡಿಯೂರಪ್ಪ ಮನೆಯವರ ಭ್ರಷ್ಟಾಚಾರದ ವರದಿ ಮಾಡಿರುವುದು ಐಟಿ, ಇಡಿ ಮತ್ತು ಪಕ್ಷದ ಗಮನಕ್ಕೆ ಬಂದಿಲ್ಲವೇ? ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿದರಿ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಮತ್ತವರ ಕುಟುಂಬದ ಅತ್ಯಂತ ಹೀನ ಭ್ರಷ್ಟಾಚಾರವನ್ನು ಹೇಗೆ ಸಹಿಸಿಕೊಳ್ಳುತ್ತಿದ್ದೀರಿ? ಪಕ್ಷ ಹಾಗೂ ಪ್ರಧಾನಿಗಳ ಗೌರವ, ಪ್ರತಿಷ್ಠೆ ಹಾಗೂ ಭವಿಷ್ಯವು ಕರ್ನಾಟಕದ ಕಸದ ಬುಟ್ಟಿಯಲ್ಲಿದೆ ಎಂಬುದು ಗೊತ್ತಿದೆಯಾ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಲ್ಹಾದ ಜೋಷಿ ಅವರನ್ನ ಟ್ಯಾಗ್ ಮಾಡಿ ಬಿದರಿ ಮತ್ತೊಂದು ಟ್ವೀಟ್ ಮಾಡಿದ್ಧಾರೆ.
ಚಿಮನ್ಭಾಯ್ ಎದುರಾಗಿ ದೊಡ್ಡ ಆಂದೋಲನ ನಡೆಸಿದ ಪಕ್ಷ, ಕೇಶುಭಾಯ್ ಅವರನ್ನ ಕಿತ್ತೊಗೆಯಲು ಮೀನಮೇಷ ಎಣಿಸದ ಪಕ್ಷ ಈಗ ಕರ್ನಾಟಕದ ಕೇಶುಭಾಯ್ ಬಗ್ಗೆ ಭಯಪಡುತ್ತಿದೆಯಾ? ಇದು ಮುಖರ್ಜಿ (ಶ್ಯಾಮಪ್ರಸಾದ್), ಉಪಾಧ್ಯಾಯ (ದೀನದಯಾಳ್) ಮತ್ತು ಅಟಲ್ಜಿ ಅವರ ಪಕ್ಷವಾ ಎಂದೂ ಬಿದರಿ ಕಟುವಾಗಿ ಪ್ರಶ್ನಿಸಿದ್ದಾರೆ.
Comments are closed.