
ತಿರುಪತಿ: ನೋಟ್ ಬ್ಯಾನ್ ಆಗಿ 4 ವರ್ಷ ಆದ್ರೂ ತಿಮ್ಮಪ್ಪನ ಹುಂಡಿಗೆ 1000 , 500 ರೂ. ಮುಖಬೆಲೆಯ ಹಳೆಯ ನೋಟುಗಳು ತಿರುಪತಿ ತಿಮ್ಮಪ್ಪನ ಹುಂಡಿಗೆ ಬಿದ್ದಿವೆ.
2019-20ರಲ್ಲೂ ಕೋಟಿ ಕೋಟಿ ರದ್ದಾಗಿರೋ ನೋಟು ಹುಂಡಿಗೆ ಬಿದ್ದಿವೆ. ಅತೀ ಶ್ರೀಮಂತ ದೇವರು ತಿಮ್ಮಪ್ಪನ ಖಜಾನೆಯಲ್ಲಿ 50 ಕೋಟಿ ಮೌಲ್ಯದ ಬ್ಯಾನ್ ಆಗಿರುವ ನೋಟುಗಳು ಪತ್ತೆಯಾಗಿವೆ. ಭಕ್ತರ ಖತರ್ನಾಕ್ ಐಡಿಯಾ ಟಿಟಿಡಿಗೆ ಪ್ರಾಣಸಂಕಟ ತಂದಿದೆ.
ರದ್ದಾದ ನೋಟುಗಳ ವಿನಿಮಯ ಅವದಿಯೂ ಮುಗಿದಿದ್ದು, 50 ಕೋಟಿ ಹಳೇ ನೋಟು ತಗೊಂಡು, ಹೊಸ ನೋಟು ಕೊಡಿ. ಬ್ಯಾಂಕುಗಳು ಹಳೇ ನೋಟು ತಗೋತಿಲ್ಲ. ಆದ್ದರಿಂದ ನೀವೇ ದಾರಿ ತೋರಿಸಿ ಎಂದು ಕೇಂದ್ರ ಸರ್ಕಾರಕ್ಕೆ ತಿರುಪತಿ ಬೋರ್ಡ್ ಮನವಿ ಮಾಡಿಕೊಂಡಿದೆ. ಟಿಟಿಡಿ ಬೋರ್ಡ್ಗೆ 50 ಕೋಟಿ ರೂಪಾಯಿ ಚಿಂತೆ ಕಾಡ್ತಿದೆ.
“ಜನರ ಧಾರ್ಮಿಕ ಭಾವನೆಗೆ ಸಂಬಂಧಿಸಿದ ವಿಚಾರ ಆಗಿರುವುದರಿಂದ ಈ ನೋಟುಗಳನ್ನು ಸ್ವೀಕರಿಸಲು ಆಗುವುದಿಲ್ಲ ಎಂದು ಭಕ್ತರಿಗೆ ಹೇಳಲಾಗದು’. ಒಮ್ಮೆ ಇವುಗಳನ್ನು ವಿನಿಮಯ ಮಾಡಿಕೊಟ್ಟರೆ ಈ ಹಣವನ್ನು ಜನಕಲ್ಯಾಣ ಹಾಗೂ ಆಧ್ಯಾತ್ಮಿಕ ಕೆಲಸಕ್ಕೆ ಬಳಸಲಾಗುವುದು” ಎಂದು ಟಿಟಿಡಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
Comments are closed.