
.ಕೋವ್ಯಾಕ್ಸ್ ಲಸಿಕೆಯ ಭಾಗವಾಗಲು ಭಾರತವು ಖಂಡಿತವಾಗಿಯೂ ಅರ್ಹವಾಗಿದೆ ಮತ್ತು ಆ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಬ್ರೂಸ್ ಐಲ್ವರ್ಡ್ ಹೇಳಿದ್ದಾರೆ. ನಾವು ಭಾರತೀಯರ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ, ಲಸಿಕೆಗಳ ಕುರಿತು ಭಾರತಕ್ಕೆ ಹೆಚ್ಚಿನ ಅನುಭವವಿದೆ ಎಂದಿದ್ದಾರೆ.
ಕಡಿಮೆ ಆದಾಯವಿರುವ ದೇಶಗಳು ಈ ಲಸಿಕೆಯಿಂದ ದೂರ ಉಳಿಯುವುದು ಬೇಡ, ಹಾಗೆಯೇ ಲಸಿಕೆ ತಡವಾದಷ್ಟು ಇನ್ನಷ್ಟು ಮಂದಿಯ ಜೀವ ಹೋಗುತ್ತದೆ ಎಂದು ಹೇಳಿದ್ದಾರೆ.
ಲಸಿಕೆ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ ಮತ್ತು ವಿತರಣೆ ವೆಚ್ಚಗಳನ್ನು ಭರಿಸಲು 1.35 ಲಕ್ಷ ಕೋಟಿಯಷ್ಟು ಹಣ ವಚ್ಚವಾಗಲಿದೆ. ಮುಖ್ಯವಾಗಿ ಮಧ್ಯಮ ಆದಾಯದ ದೇಶಗಳಲ್ಲಿ ಮತ್ತು ವಿತರಣೆಗಾಗಿ ಮುಂದಿನ ವರ್ಷದ ಅಂತ್ಯದ ವೇಳೆಗೆ ಕನಿಷ್ಠ ಎರಡು ಶತಕೋಟಿ ಡೋಸ್ ಕೊರೊನಾವೈರಸ್ ಲಸಿಕೆ ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ.
ವಿಶ್ವ ಆರೋಗ್ಯ ಸಂಸ್ಥೆ ಹಾಗೂ GAVI ಲಸಿಕೆ ಒಕ್ಕೂಟವು ಕೋವ್ಯಾಕ್ಸ್ ಅಭಿವೃದ್ಧಿಪಡಿಸುತ್ತಿದೆ. ಇದು ವಿಶ್ವದಾದ್ಯಂತ ಇರುವ ಜನರಿಗೆ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಲಿದೆ.
Comments are closed.