ಕರ್ನಾಟಕ

ನಾನು ತಪ್ಪು ಮಾಡಿದ್ದರೆ ಆತ್ಮಹತ್ಯೆಗೂ ಸಿದ್ದ: ಹೇಳಿಕೆಗೆ ಸಚಿವ ಸೋಮಣ್ಣ ವಿಷಾದ

Pinterest LinkedIn Tumblr


ಬೆಂಗಳೂರು: ನಾನು ತಪ್ಪು ಮಾಡಿದ್ರೆ ಆತ್ಮಹತ್ಯೆಗೆ ಸಿದ್ದ ಎಂದು ಈ ಹೇಳಿದ್ದ ಹೇಳಿಕೆಗೆ ವಸತಿ ಸಚಿವ ವಿ ಸೋಮಣ್ಣ ವಿಷಾದ ವ್ಯಕ್ತಪಡಿಸಿದ್ದಾರೆ.

ತಪ್ಪು ಮಾಡಿ ಬಡವರಿಗೆ ವಂಚಿಸಿದ್ರೆ ಅಂತಹವರಿಗೆ ಶಿಕ್ಷೆ ಕೊಡಿಸೋಕ್ಕೂ ರೆಡಿ. ಬಡವರಿಗಾಗಿ ಶಾಸಕರ ಸಲಹೆಯನ್ನು ಸ್ವೀಕರಿಸುತ್ತೇವೆ. ಸರ್ಕಾರದ ವಸತಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಿಯೇ ಸಿದ್ಧ. ಅನರ್ಹರಿಗೆ ಮನೆ ಹಂಚಿದವರ ವಿರುದ್ಧ ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗುಡುಗಿದ್ದಾರೆ.

ಗೊಂದಲದ ಗೂಡಾಗಿದ್ದ ವಸತಿ ಇಲಾಖೆಯನ್ನ ಲಾಜಿಕಲ್ ಎಂಡ್‍ಗೆ ತಂದಿದ್ದೇವೆ. 5 ಲಕ್ಷ 40 ಸಾವಿರ ಮನೆ 180 ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಸಿಗಲಿದೆ. ಆದರೆ ಅರ್ಹ ಫಲಾನುಭವಿಗಳ ನಡುವೆ ಅನರ್ಹರು ಸಿಕ್ಕಿದ್ದಾರೆ. ಈ ಯೋಜನೆಯಲ್ಲಿ ಮಿಸ್ ಯೂಸ್ ಆಗ್ತಾ ಇತ್ತು. ಪಿಡಿಓಗಳು ಮಾಡಿರುವ ತಪ್ಪುಗಳಿವು. ಪಿಡಿಓಗಳು ಹೇಳಿದ್ದು ಎಲ್ಲವೂ ಸರಿ ಇರೋದಿಲ್ಲ. ಕೆಲವು ಪಿಡಿಓಗಳು ರಾಕ್ಷಸ ಪ್ರವೃತ್ತಿಯವರು ಇರ್ತಾರೆ ಎಂದಿದ್ದೇನೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ವಿ. ಸೋಮಣ್ಣ ಪ್ರಧಾನ ಮಂತ್ರಿ, ರಾಜ್ಯ ಸರ್ಕಾರದ ಯೋಜನೆಗಳಡಿ ಮನೆ ಹಂಚಿಕೆ ಮಾಡ್ತೀವೆ, ಒಳ್ಳೆ ಕೆಲಸ ಮಾಡಿರೋ ಪಿಡಿಓಗಳಿಗೆ ಎಲ್ಲಾ ಸಹಕಾರಗಳನ್ನ ನೀಡ್ತೇವೆ. ಅನರ್ಹರಿಗೆ ಹಂಚಿಕೆಯಾಗಿರೋದನ್ನು ತಕ್ಷಣವೇ ತಡೆಯುತ್ತೇವೆ. ರಾಜ್ಯದ ಅರ್ಹ ಬಡವರಿಗೆ ವಸತಿ ನೀಡಲು ಇಲಾಖೆ ಬದ್ಧವಾಗಿದೆ ಎಂದು ಬಡವರಿಗೆ ಭರವಸೆ ನೀಡಿದ್ದಾರೆ.

Comments are closed.