ಕರಾವಳಿ

‘ಗೋವಿಗಾಗಿ ಮೇವು’ ಅಧಿಕೃತ ಪೇಸ್ಬುಕ್ ಪೇಜ್ ಲೋಕಾರ್ಪಣೆಗೊಳಿಸಿದ ಸಚಿವ ಕೋಟ

Pinterest LinkedIn Tumblr

ಉಡುಪಿ: ಕಾಮದೇನು ಗೋಸೇವಾ ಸಮಿತಿ ಮಂದಾರ್ತಿ ಇವರ ನೇತ್ರತ್ವದಲ್ಲಿ ಅನಾಥ ಗೋವುಗಳ ರಕ್ಷಣೆ ಮಾಡುತ್ತಿರುವ ಗೋಶಾಲೆಗಳಿಗೆ ವಿವಿಧ ಸಂಘಸಂಸ್ಥೆಗಳ ಮೂಲಕ ಮೇವನ್ನು ನೀಡಲು ಆರಂಭಗೊಂಡಿರುವ ಗೋವಿಗಾಗಿ ಮೇವು ಅಭಿಯಾನದ ಅಧಿಕೃತ ಪೇಸ್ಬುಕ್ ಪೇಜ್ ಅನ್ನು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ‘ಗೋವಿಗಾಗಿ ಮೇವು’ ಬಂದರು,ಮೀನುಗಾರಿಕೆ ಹಾಗೂ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಗೋವಿಗಾಗಿ ಮೇವು ಅಭಿಯಾನ ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು ಮುಂದಿನದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ವ್ಯಾಪಿಸಲಿ ಎಂದರು.

ಗೋವಿಗಾಗಿ ಮೇವು ಅಭಿಯಾನದ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಪ್ರಸ್ಥಾವಿಕ ಮಾತನಾಡಿ, ಫೇಸ್ಬುಕ್ ಮೂಲಕ ರಾಜ್ಯಾದ್ಯಂತ ಸಾರ್ವಜನಿಕರನ್ನ,ಸಂಘಸಂಸ್ಥೆಗಳನ್ಮ ಅಭಿಯಾನಕ್ಕೆ ಪ್ರೇರೇಪಿಸುವುದು ನಮ್ಮಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬೈಂದೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹೇಂದ್ರ ಪೂಜಾರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಪ್ರಮುಖರಾದ ಹರೀಶ್ ಶೆಟ್ಟಿ ಚೇರ್ಕಾಡಿ, ರಾಜು ಕುಲಾಲ್, ಕಮಲಾಕ್ಷ ಹೆಬ್ಬಾರ್, ಅಕ್ಷತ್ ಸೇರೆಗಾರ್, ದಿ!ಪ್ರತೀಕ್ ಶೆಟ್ಟಿ ಗೆಳೆಯರ ಬಳಗ ಹೆಂಗವಳ್ಳಿ ಯ ಸದಸ್ಯರು ,ಪ್ರೆಂಡ್ಸ್ ಬಳ್ಕೂರಿನ ಸದಸ್ಯರು ಉಪಸ್ಥಿತರಿದ್ದರು.

Comments are closed.