ಕರಾವಳಿ

ರಾಷ್ಟ್ರೀಯ ಮಕ್ಕಳ ಉತ್ಸವ ‘ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಅಮೆರಿಕ, ಅಸ್ಟ್ರೇಲಿಯಾ ಸೇರಿದಂತೆ ದೇಶ ವಿದೇಶಗಳಲ್ಲಿ ನೆಲೆಸಿರುವ ಮಕ್ಕಳು ಭಾಗಿ

Pinterest LinkedIn Tumblr

ಕಲ್ಕೂರ ಪ್ರತಿಷ್ಠಾನವು ‘ಆನ್ ಲೈನ್ ಮೂಲಕ ಏರ್ಪಡಿಸಿದ್ ‘ಶ್ರೀ ಕೃಷ್ಣ ವೇಷ ಸ್ಪರ್ಧೆ’ ರಾಷ್ಟ್ರೀಯ ಮಕ್ಕಳ ಉತ್ಸವದ ಉದ್ಘಾಟನಾ ಸಮಾರಂಭ

ಮಂಗಳೂರು, ಸೆಪ್ಟಂಬರ್.11: ಕಲ್ಕೂರ ಪ್ರತಿಷ್ಠಾನವು ಕೋರೋನಾ ಹಿನ್ನೆಲೆಯಲ್ಲಿ ‘ಆನ್ ಲೈನ್ ಮೂಲಕ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ ‘ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಉದ್ಘಾಟನೆ ಯನ್ನು ಗುರುವಾರ ಕಟೀಲು ಲಕ್ಷ್ಮೀನಾರಾಯನ ಅಸ್ರಣ್ಣ ನೆರವೇರಿಸಿದರು.

ಶಾರದ ವಿದ್ಯಾಲಯದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶ್ರೀ ಕೃಷ್ಣನ ಜೀವನದ ಮೌಲ್ಯಯುತವಾದ ವಿಚಾರಗಳು ಎಳೆಯ ಮಕ್ಕಳಲ್ಲಿ ಸ್ಪುರಿಸುವುದಕ್ಕೆ ಇಂತಹ ಸ್ಪರ್ಧೆಗಳು ಪೂರಕವಾಗ ಬೇಕೆಂದು ಹಾರೈಸಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನದ ವತಿಯಿಂದ ‘ಆನ್ ಲೈನ್ ಮೂಲಕ ನಡೆದ ರಾಷ್ಟ್ರೀಯ ಮಕ್ಕಳ ಉತ್ಸವ ‘ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಈ ಬಾರಿ ಅಮೆರಿಕ, ಅಸ್ಟ್ರೇಲಿಯಾ, ಫ್ಲೋರಿಡಾ ಹಾಗೂ ಹೊಸದಿಲ್ಲಿ, ಮುಂಬಾಯಿ ಸಹಿತಾ ಅಂತರಾಷ್ಟ್ರ, ಅಂತಾರಾಜ್ಯಗಳಲ್ಲಿ ನೆಲೆಸಿರುವ ಸುಮಾರು 5000 ಮಂದಿ 32 ವಿಭಾಗಗಳಲ್ಲಿ ನಡೆದ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ವೇದಿಕೆಯಲ್ಲಿ ಕಲಾವಿದ ಜಾನ್ ಚಂದ್ರನ್, ಸುಧಾಕರ ರಾವ್ ಪೇಜಾವರ, ರತ್ನಾಕರ ಜೈನ್, ವಿಜಯಲಕ್ಷ್ಮೀ ಬಿ. ಶೆಟ್ಟಿ, ಕದ್ರಿ ದೇವಳದ ಅರ್ಚಕ ರಾಘವೇಂದ್ರ ಅಡಿಗರು, ತಾರಾನಾಥ ಶೆಟ್ಟಿ ಬೋಳಾರ ನವನೀತ ಶೆಟ್ಟಿ ಕದ್ರಿ ದಯಾನಂದ ಕಟೀಲು, ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು.

ಒಟ್ಟು 32 ವಿಭಾಗಗಳಲ್ಲಿ ನಡೆದ ಕೃಷ್ಣ ವೇಷ ಸ್ಪರ್ಧೆ :

ಕಲ್ಕೂರ ಪ್ರತಿಷ್ಠಾನವು ಆನ್ ಲೈನ್ ಮೂಲಕ ಆಯೋಜಿಸಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಕೃಷ್ಣ ವೇಷ ಸ್ಪರ್ಧೆ ಒಟ್ಟು 37 ವಿಭಾಗಗಳಲ್ಲಿ ಏರ್ಪಡಿಸಲಾಗಿತ್ತು.

ಇಂದು ಬೆಳಗ್ಗೆ 9 ರಿಂದ ಅಪರಾಹ್ನ12.30ರವರೆಗೆ ಶ್ರೀ ಕೃಷ್ಣ ವರ್ಣ ವೈಭವ, ಶ್ರೀ ಕೃಷ್ಣ ಗಾನ ವೈಭವ, ರಂಗೋಲಿಯಲ್ಲಿ ಶ್ರೀ ಕೃಷ್ಣ, ಛಾಯ ಕೃಷ್ಣ, ಶಂಖ ನಾದ, ಶಂಖ ಉದ್ಘೋಷ, ಗೀತಾ ಕೃಷ್ಣ ನಂತರ ಮಧ್ಯಾಹ್ನ 12.30೦ರಿಂದ ತೊಟ್ಟಿಲ ಕೃಷ್ಣ, ವೃಕ್ಷ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲ ಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ರಾಧಾ ಕೃಷ್ಣ, ರಾಧಾ ಮಾಧವ, ದೇವಕಿ ಕೃಷ್ಣ, ಯಶೋಧ ಕೃಷ್ಣ, ಯಕ್ಷ ಕೃಷ್ಣ, ವಸುದೇವ ಕೃಷ್ಣ, ನಂದಗೋಕುಲ, ಸಂಜೆ 6ರಿಂದ7ರವರೆಗೆ ಅಚ್ಯುತ ಮತ್ತು ಮಾಧವ ರಸಪ್ರಶ್ನೆ ನೇರಪ್ರಸಾರದಲ್ಲಿ ನೆರವೇರಿತು.

ರಾತ್ರಿ 9.30ಕ್ಕೆ ಸಮಾರೋಪ ಸಮಾರಂಭ ಹಾಗೂ ಆನ್ ಲೈನ್ ಕೃಷ್ಣ ವೇಷ ಸ್ಪರ್ಧೆಯ ವಿಜೇತರನ್ನು ಘೋಷಣೆ ಮಾಡಲಾಯಿತು.

ನೇರಪ್ರಸಾರದಲ್ಲಿ ರಾತ್ರಿ 11.30ಕ್ಕೆ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Comments are closed.