ಉಡುಪಿ: ಅಕ್ರಮವಾಗಿ ಗೋವುಗಳನ್ನು ವಧೆ ಮಾಡುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿದ ಕಾಪು ಪೊಲೀಸರು ಮೂರು ಜಾನುವಾರುಗಳನ್ನು ರಕ್ಷಿಸಿದ್ದು ಗೋ ಮಾಂಸ, ಕಾರುಗಳ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಕಾಪು ಮಲ್ಲಾರು ಎಂಬಲ್ಲಿ ಗುರುವಾರ ನಡೆದಿದೆ. ಉದ್ಯಾವರ ಗುಡ್ಡೆಯಂಗಡಿ ನಿವಾಸಿ ಮೊಹಮ್ಮದ್ ತಾವಾ(35) ಮತ್ತು ಮೂಳೂರು ನಿವಾಸಿ ಮೊಯ್ದಿನಬ್ಬ (26) ಬಂಧಿತರು. ಈ ವೇಳೆ ಶಮೀರ್ ಮತ್ತು ನೌಷಾದ್ ಎಂಬವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಗುರುವಾರ ಬೆಳಿಗ್ಗೆ ಕಾಪು ಪಿಎಸ್ ಐ ರಾಜಶೇಖರ್ ಬಿ ಸಾಗನೂರು ಇವರಿಗೆ ಮಲ್ಲಾರು ಕುಡ್ತಿಮಾರ್ ಎಂಬಲ್ಲಿ ಕೈರುನ್ನಿಸಾ ಕಾಟೇಜ್ ಹೆಸರಿನ ಮನೆಯ ಕಂಪೌಡಿನ ಸಮೀಪ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡುಲು ತಯಾರಿಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು ಇಬ್ಬರನ್ನು ಬಂಧಿಸಿದ್ದು ಆರೋಪಿಗಳು ಮೂಡಬೆಟ್ಟು ಪರಿಸರದಿಂದ ದನಕರುಗಳನ್ನು ಕಳವು ಮಾಡಿಕೊಂಡು ಬಂದು ಮಾಂಸವನ್ನು ಮಾಡಿ ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ 23000 ಮೌಲ್ಯದ ಗೋ ಮಾಂಸ, 9000 ಮೌಲ್ಯದ ಜೀವಂತ ದನ ಹಾಗೂ ಎರಡು ಕರುಗಳು, 2ಲಕ್ಷ ಮೌಲ್ಯದ ಒಕ್ಟೇವಿಯಾ ಕಾರು, 10 ಲಕ್ಷ ಮೌಲ್ಯದ ಕ್ರೆಟಾ ಕಾರು, 30000 ಮೌಲ್ಯದ ಜೂಪಿಟರ್ ಸ್ಕೂಟರ್, 11000 ಮೌಲ್ಯದ 4 ಮೊಬೈಲ್ ಹಾಗೂ ಇತರ ವಸ್ತುಗಳನ್ನು ವಶಪಡಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 12 ಲಕ್ಷದ 73 ಸಾವಿರದ 300 ರೂ. ಆಗಿದೆ.
ಉಡುಪಿ ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕಾರ್ಕಳ ಉಪವಿಭಾಗದ ಉಪಾಧೀಕ್ಷಕ ಭರತ್ ರೆಡ್ಡಿ, ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು ಕಾನೂನು ಸುವ್ಯವಸ್ಥೆ ಪಿಎಸ್ಐ ರಾಜಶೇಖರ್ ಬಿಎಸ್., ಅಪರಾಧ ವಿಭಾಗದ ಪಿಎಸ್ಐ ಐ.ಆರ್ ಗಡ್ಡೆಕರ್ ಹಾಗೂ ಸಿಬ್ಬಂದಿಗಳಾದ ರವೀಂದ್ರ ,ಆನಂದ್, ಅರುಣ್, ಮಂಜುನಾಥ್, ಸಂದೇಶ್, ಪರಶುರಾಮ್, ಚಂದ್ರಶೇಖರ್, ಜಗದೀಶ್, ಮಹಾಬಲ, ಗೀತಾ ಮೊದಲಾದವರು ಇದ್ದರು.
Comments are closed.