ಮನೋರಂಜನೆ

ಬೀದಿ ನಾಯಿ ಸಂಬರಗಿಯನ್ನು ನಾನು ಸತ್ತರೂ ಬಿಡುವುದಿಲ್ಲ: ನಟಿ ಸಂಜನಾ

Pinterest LinkedIn Tumblr


ಬೆಂಗಳೂರು: ನನ್ನ ಮೇಲೆ ವಿನಾಕಾರಣ ಆರೋಪಗಳನ್ನು ಮಾಡುತ್ತಿರುವ ಪ್ರಶಾಂತ್ ಸಂಬರಗಿ ಒಬ್ಬ ಬೀದಿ ನಾಯಿ. ಆತನನ್ನು ಸುಮ್ಮನೆ ಬಿಡಬಾರದು ಎಂದು ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜನಾ, ಸಂಬರಗಿಗೆ ಯಾವುದೇ ಕೆಲಸವಿಲ್ಲ. ಪ್ರಚಾರಕ್ಕಾಗಿ ಹೀಗೆ ಮಾತನಾಡುತ್ತಿದ್ದಾನೆ. ನಾನೊಬ್ಬಳು ಸೆಲೆಬ್ರೆಟಿ ಎಂಬ ಕಾರಣಕ್ಕೆ ನನ್ನ ಹಿಂದೆ ಬಿದ್ದಿದ್ದಾನೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಜಮೀರ್ ಅಹಮದ್ ಗೆ ಸಂಜನಾ ಮನವಿ ಮಾಡಿದ್ದು, ಆ ಬೀದಿ ನಾಯಿ ಸಂಬರಗಿಯನ್ನು ಬಿಡಬೇಡಿ ಸರ್ ಎಂದಿದ್ದಾರೆ.

ರಾಹುಲ್ ನನ್ನ ಸ್ವಂತ ತಮ್ಮನಲ್ಲ. ಆತನೂ ಒಳ್ಳೆಯವನೆ. ಯಾವುದೇ ಹುಡುಕಾಟದಲ್ಲಿ ಸಿಕ್ಕಿಬಿದ್ದಿದ್ದಾನೆ. ಆದರೆ ಅವನ ಕಾರಣಕ್ಕೆ ನನಗೆ ಯಾಕೆ ಶಿಕ್ಷೆ ಕೊಡುತ್ತಿದ್ದೀರಿ ಎಂದು ಸಂಜನಾ ಹೇಳಿದರು.

ಈ ಎಲ್ಲಾ ಆರೋಪಗಳಿಂದ ನನಗೆ ಕಿರುಕುಳವಾಗುತ್ತಿದೆ. ಇದರಿಂದ ನನ್ನ ತಾಯಿಗೂ ಅನಾರೋಗ್ಯವಾಗಿದೆ. ಒಂದು ವೇಳೆ ನನ್ನ ತಾಯಿಗೆ ಏನಾದರೂ ಆದರೆ, ನಾನು ಸತ್ತರೂ ಸಂಬರಗಿಯನ್ನು ಬಿಡುವುದಿಲ್ಲ ಎಂದು ಸಂಜನಾ ಗಲ್ರಾನಿ ಕಿಡಿಕಾರಿದರು.

Comments are closed.