
ಬೆಂಗಳೂರು(ಸೆ.07): ಸ್ಯಾಂಡಲ್ವುಡ್ ಡ್ರಗ್ ಕೇಸ್ ಇದೀಗ ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ. ಡ್ರಗ್ಸ್ ದಂಧೆಗೆ ಕೇವಲ ಚಂದನವನದ ನಟನಟಿಯರು ಮಾತ್ರವಲ್ಲ, ಪೊಲೀಸ್ ಮಕ್ಕಳು, ವಿದ್ಯಾವಂತರು ತುತ್ತಾಗಿ ಪೆಡ್ಲರ್ ಕೂಡ ಆಗಿ ಮಾರ್ಪಾಟಾಗುತ್ತಿದ್ದಾರೆ. ರಾಜಧಾನಿಯಲ್ಲಿ ಟೆರೇಸ್ ಮೇಲೆ ಗಾಂಜಾ ಬೆಳೆಯುತ್ತಾರೆ. ಒಂದು ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಬಗೆಯ ಡ್ರಗ್ಸ್ ವಶಕ್ಕೆ ಪಡೆದ ಬೆಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಚಂದನವನದಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆಗೆ ಸಿಸಿಬಿ ಪೊಲೀಸರು ಈಗಾಗಲೇ ಹೆಡೆಮುರಿಕಟ್ಟುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿನ ಆಗ್ನೇಯ ವಲಯ ವಿವಿಧ ಪೊಲೀಸ್ ಠಾಣೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಪರಪ್ಪನ ಅಗ್ರಹಾರ ಪೊಲೀಸರ ಕಾರ್ಯಾಚರಣೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಗಾಂಜಾ ಕೇಸಿನಲ್ಲಿ ಪೊಲೀಸ್ ಪುತ್ರನ ಬಂಧನವಾಗಿದೆ. ವಿಶ್ವಾಸ್ ಎಂಬ ಈತ ಪೊಲೀಸ್ ಮಗನಾಗಿದ್ದು, ಕಬಾಬ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಪೆಡ್ಲಿಂಗ್ ಮಾಡ್ತಿದ್ದ. ಪೊಲೀಸ್ ಸಿಬ್ಬಂದಿ ಮಗ ವಿಶ್ವಾಸ್ ಡ್ರಗ್ಸ್ ಬಳಸಿ ಮುಂದೆ ತಾನೇ ಮಾರಾಟ ಮಾಡಲು ಮುಂದಾಗಿದ್ದ ಖಚಿತ ಮಾಹಿತಿ ಮೇರೆಗೆ ಬಂಧಿಸಿ, ಆರೋಪಿಯಿಂದ 66 ಲಕ್ಷ 165 ಕೇಜಿ ವಶ ಪಡೆದುಕೊಂಡಿದ್ದಾರೆ. ಈತನಿಗೆ ಸಹಕಾರ ನೀಡಿದ ಅಂಬರೇಶ್ನನ್ನು ಬಂಧಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂಥ್, ರಾಜಧಾನಿಯಲ್ಲಿ ಅತೀ ಹೆಚ್ಚು ಗಾಂಜಾ ಸೀಜ್ ಅಗುತ್ತಿದೆ. ಬೆಂಗಳೂರಿನ ಬಹುತೇಕ ಎಲ್ಲ ಸ್ಟೇಷನ್ನಿಂದ ಸೀಜ್ ಆಗಿದೆ ಎಂದು ಮಾಹಿತಿ ನೀಡಿದರು. ಪೊಲೀಸ್ ಮಗ, ಇಂಜಿನಿಯರ್ ಸಹ ಪೆಡ್ಲರ್ ಆಗಿ ಮಾರ್ಪಾಟಾಗಿರುವುದನ್ನು ಖಚಿತಪಡಿಸಿದರು.
ಕೇವಲ ಗಾಂಜಾ ಮಾತ್ರವಲ್ಲ ಎಂಡಿಎಂಸಿ, ಸಿಂಥೆಟಿಕ್ ಡ್ರಗ್ಸ್ ಸೇರಿದಂತೆ ಹಲವು ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಡಾರ್ಕ್ ನೈಟ್ ವೆಬ್ಸೈಟ್ ಮೂಲಕ ಗಾಂಜಾ ಸೇಲ್ ಜಾಸ್ತಿಯಾಗುತ್ತಿದೆ. ಈ ಪ್ರಕರಣದಲ್ಲಿ ರಾಜಕೀಯ ಒತ್ತಡವಿದೆಯಾ ಎಂಬ ಪ್ರಶ್ನೆಗೆ ಕೇಸ್ ಪರ್ಫೆಕ್ಟ್ ಆಗಿ ತನಿಖೆಯಾಗ್ತಿದೆ ಎಂದಷ್ಟೇ ಪೊಲೀಸ್ ಕಮಿಷಿನರ್ ಕಮಲ್ ಪಂಥ್ ಪ್ರತಿಕ್ರಿಯೆ ನೀಡಿದರು.
ಇನ್ನು ಸಿಲಿಕಾನ್ ಸಿಟಿಯಲ್ಲೂ ಹೈ ಬ್ರಿಡ್ ಮಾರಿಜುನಾ ಗಾಂಜಾ ಬೆಳೆಯುತ್ತಾರೆ. ಜೆಪಿ ಮನೆ ಟೆರಸ್ ಮೇಲೆ ಮಾರಿಜುನಾ ಗಾಂಜ ಬೆಳೆಯಲಾಗಿತ್ತು. ಗ್ರಾಂ ಗೆ ಐದರಿಂದ ಆರು ಸಾವಿರ ಇರೋ ಹೈ ಬ್ರೀಡ್ ಗಾಂಜಾ ವನ್ನು ಬೆಳೆಯುತ್ತಿದ್ದಿದು, ಇಂಜಿನಿಯರಿಂಗ್ ಓದುತ್ತಿರುವ ಆದಿತ್ಯ(26) ವಿದ್ಯಾರ್ಥಿ. ತಿಲಕ್ ನಗರ ಪೊಲೀಸರಿಂದ ಮಾರಿಜುನಾ ಗಿಡಗಳು ವಶಕ್ಕೆ ಪಡೆದಿದ್ದಾರೆ. ಬಂಧಿತ ಆದಿತ್ಯ ಬಿಎಂಎಸ್ ಕಾಲೇಜ್ ಬಿಇ ಓದುತ್ತಿರುವ ಆರೋಪಿಯಾಗಿದ್ದು, ಗಾಂಜಾ ಮನೆಯಲ್ಲಿ ಬೆಳೆದು ಪೆಡ್ಲಿಂಗ್ ಮಾಡ್ತಿದ್ದ.
ಈತ ಗುಜರಾತ್ನ ರಾಜ್ ಕೋಟ್ ಮೂಲದ ಬಂಧಿತ ವಿಧ್ಯಾರ್ಥಿಯಾಗಿದ್ದು, ಬೆಂಗಳೂರಿಗೆ ಬಂದು ನಾಲ್ಕು ವರ್ಷ ಆಗಿದೆ. ಜೆ ಪಿ ನಗರದಲ್ಲಿ ಮನೆ ಮಾಡಿಕೊಂಡು ವಾಸವಾಗಿರುವ ಆರೋಪಿ, ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಪೆಡ್ಲಿಂಗ್ ಮಾಡುತ್ತಿದ್ದನಂತೆ. ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರ ಕಾರ್ಯಾಚರಣೆಯಲ್ಲಿ ಒಂದು ಕೋಟಿಗೂ ಹೆಚ್ಚು ಮಾದಕವಸ್ತು ವಶಪಡಿಸಿಕೊಂಡು ಒಟ್ಟು 20 ಆರೋಪಿಗಳ ಬಂಧಿಸಲಾಗಿದೆ.ಇದನ್ನೂ ಓದಿ: ಐದುವರೆ ತಿಂಗಳುಗಳ ಬಳಿಕ ಮೆಟ್ರೋ ಸೇವೆ ಆರಂಭ; ಮೊದಲ ದಿನ ಪ್ರಯಾಣಿಕರಿಲ್ಲದೇ ಮೆಟ್ರೋ ಖಾಲಿ ಖಾಲಿ
10 ಪ್ರಕರಣ ಬೇಧಿಸಿದ ಪೊಲೀಸರು, 187 ಕೇಜಿ ಗಾಂಜಾ, 80 ಗ್ರಾಂ ಗಾಂಜಾ, 950 ಗ್ರಾಂ ಗಾಂಜಾ ಆಯಿಲ್(ಹ್ಯಾಶಿಸ್), 25 ಗ್ರಾಂ ಹೈಡ್ರೋ ಗಾಂಜಾ, 492 ಗ್ರಾಂ ಎಂಡಿ ಎಂಎ, 4 ಗ್ರಾಂ ಕೋಕೇನ್, 5 ಎಂಡಿಎಂಎ ಟ್ಯಾಬ್ಲೆಟ್, 5 ಎಲ್ ಎಸ್ ಡಿ ಸ್ಟ್ರಿಪ್ಸ್ ಕುಂಡಗಳಲ್ಲಿ ಬೆಳೆಸಿದ್ದ 8 ಹೈಡ್ರೋ ಗಾಂಜಾ ಗಿಡ ವಶಕ್ಕೆ ಪಡೆದಿದ್ದಾರೆ.
Comments are closed.