ರಾಷ್ಟ್ರೀಯ

ಹಿಂದೂ ದೇವತೆ ಕಾಳಿಮಾತೆ ಅವಹೇಳನ: ಟ್ವಿಟರ್‌ ವಿರುದ್ಧ ದೂರು

Pinterest LinkedIn Tumblr


ಹೊಸದಿಲ್ಲಿ: ಹಿಂದೂ ದೇವತೆ ಕುರಿತು ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಲು ಅನುಮತಿ ನೀಡಿದ್ದಕ್ಕಾಗಿ ಟ್ವಿಟರ್‌ ವಿರುದ್ಧ ವಿಶ್ವ ಹಿಂದೂ ಪರಿಷತ್‌ ವಕ್ತಾರ ವಿನೋದ್‌ ಬನ್ಸಾಲ್‌ ದಿಲ್ಲಿ ಹಾಗೂ ಮುಂಬಯಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ದೇವತೆಯನ್ನು ನಿಂದಿಸಿರುವ ಪೋಸ್ಟ್‌ ಪ್ರಕಟಿಸಲು ಟ್ವಿಟರ್‌ ಅವಕಾಶ ನೀಡಿದೆ. ಅಲ್ಲದೇ ಈ ಪೋಸ್ಟ್‌ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೂಗಳ ಭಾವನೆಗಳಿಗೆ ಘಾಸಿಯುಂಟು ಮಾಡಲಾಗಿದೆ’ ಎಂದು ದೂರಿದ್ದಾರೆ.

ಇರಾನ್‌ ಮೂಲದ ಕೆನಡಾ ಪ್ರಜೆಯಾಗಿರುವ ಲೇಖಕ ಅರ್ಮಿನ್‌ ನವಾಬಿ ಎಂಬುವವರು ತಮ್ಮ ಟ್ವೀಟ್‌ನಲ್ಲಿ ಕಾಳಿಮಾತೆಯ ಫೋಟೋ ಪ್ರಕಟಿಸಿ “ಹೌದು, ನಾನು ಹಿಂದೂ ಧರ್ಮವನ್ನು ಪ್ರೀತಿಸುತ್ತೇನೆ. ಆದರೆ ನೀವು ಈ ರೀತಿಯ ಮಾದಕ (ಸೆಕ್ಸೀ) ದೇವತೆಗಳನ್ನು ಹೊಂದಿದ್ದೀರಿ ಎಂದು ತಿಳಿದಿರಲಿಲ್ಲ’ ಎಂದು ಬರೆದುಕೊಂಡಿದ್ದರು.

Comments are closed.