ಕರ್ನಾಟಕ

ಭೀಮಾ ನದಿಗೆ ಈಜಲು ತೆರಳಿದ ನಾಲ್ವರು ಯುವಕರು ನಾಪತ್ತೆ

Pinterest LinkedIn Tumblr

ಯಾದಗಿರಿ: ಭೀಮಾ ನದಿಗೆ ಈಜಲು ತೆರಳಿದ ನಾಲ್ಕು ಮಂದಿ ನಾಪತ್ತೆಯಾದ ಪ್ರಕರಣ ನಗರದ ಹೊರವಲಯದ ಗುರುಸಣಗಿ ಸೇತುವೆ ಬಳಿ ಭಾನುವಾರ ಸಂಭವಿಸಿದೆ. ಯಾದಗಿರಿಯ ಅಮಾನ್ (16) ಅಯಾನ್ (16) ರೆಹಮಾನ್ (16) ಕಲಬುರಗಿ ಮೂಲದ ರೆಹಮಾನ್ 15 ನಾಪತ್ತೆಯಾದವರು ಎಂದು ತಿಳಿದುಬಂದಿದೆ.

ಐದು ಜನ ಯುವಕರ ತಂಡ ಸೇತುವೆಯ ಬಳಿ ಬಂದಿದ್ದು ಅವರಲ್ಲಿ ಅಬ್ದುಲ್ ಎಂಬಾತ ನೀರಿಗೆ ಇಳಿಯದೆ ನದಿಯ ದಡದಲ್ಲಿ ನಿಂತಿದ್ದು ಉಳಿದ ನಾಲ್ವರು ಈಜಲು ನೀರಿಗೆ ಇಳಿದಿದ್ದು ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿದ್ದ ಪರಿಣಾಮ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಹಿರಿಯ ಅಧಿಕರಿಗಳು ಭೇಟಿ ನೀಡಿದ್ದು ಅಗ್ನಿಶಾಮಕ ದಳದಿಂದ ಶೋಧ ಕಾರ್ಯಚುರುಕುಗೊಂಡಿದೆ.

Comments are closed.